ವ್ಯಾಟ್ಸ್​ನ್, ತಾಹಿರ್ ಮಕ್ಕಳ ಜೊತೆ ಧೋನಿ ರೇಸ್..!

ಚೆನ್ನೈ ಸೂಪ್​ ಕಿಂಗ್ಸ್​ ಕ್ಯಾಪ್ಟನ್ ಧೋನಿ, ನಿನ್ನೆ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯ ಗೆದ್ದ ನಂತರ ಸಖತ್ ಕೂಲ್ ಆಗಿದ್ರು. ತಂಡದ ಆಟಗಾರರಾದ ಶೇನ್ ವ್ಯಾಟ್ಸನ್​, ಇಮ್ರಾನ್ ತಾಹಿರ್ ಮಕ್ಕಳ ಜೊತೆ ರನ್ನಿಂಗ್​ ರೇಸ್​ನಲ್ಲಿ ಭಾಗವಹಿಸಿದ್ರು.ಜ್ಯೂನಿಯರ್ ತಾಹಿರ್​ ಹಾಗು ಜ್ಯೂನಿಯರ್ ವ್ಯಾಟ್ಸನ್ ರನ್ನಿಂಗ್​ ರೇಸ್​ಗೆ ರೆಡಿಯಾಗುತ್ತಿದ್ದಾಗ ಹಿಂದಿನಿಂದ ಬಂದ ಧೋನಿ ಕಮಾನ್,ಕಮಾನ್ ಎಂದು ಅವರಿಬ್ಬರ ಜೊತೆ ಓಡಿದ್ರು.ಆಮೇಲೆ ತಾಹಿರ್ ಮಗನನ್ನ ಎತ್ತಿಕೊಂಡು ಓಡಿದ ಬಂದು ನಾವೇ ಫಸ್ಟ್ ಎಂದು ವ್ಯಾಟ್ಸನ್​ನ ಮಗನಿಗೆ ಛೇಡಿಸಿದ್ರು. ಇನ್ನೂ ಇದಕ್ಕೂ ಮುನ್ನ ಪಂದ್ಯದ ವೇಳೆ ಧೋನಿ, ಸತತ ಎರಡು ನೋ ಬಾಲ್ ಹಾಕಿದ ತಮ್ಮ ತಂಡದ ಬೌಲರ್ ದೀಪಕ್ ಚಹಾರ್ ವಿರುದ್ಧ ಕೋಪಗೊಂಡು ಕ್ಲಾಸ್ ತಗೊಂಡಿದ್ರು. ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸಿಎಸ್​ಕೆ 22 ರನ್​ಗಳಿಂದ ಜಯ ಸಾಧಿಸಿತು.