ಚೆನ್ನೈ ಸೂಪರ್​ಕಿಂಗ್ಸ್​ಗೆ 5 ವಿಕೆಟ್​ಗಳ ಗೆಲುವು..!

ಕೋಲ್ಕತ್ತಾ: ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್​ರೈಡರ್ಸ್​ ವಿರುದ್ಧ ಚೆನ್ನೈ ಸೂಪರ್​ಕಿಂಗ್ಸ್​​ 5 ವಿಕೆಟ್​​ಗಳ ರೋಚಕ ಗೆಲುವು ದಾಖಲಿಸಿದೆ. 162 ರನ್​ ಗುರಿ ಬೆನ್ನಟ್ಟಿದ್ದ ಸಿಎಸ್​ಕೆ 66 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸುರೇಶ್​ ರೈನಾ, ನಾಯಕ ಧೋನಿ 30 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದ್ರು.16 ರನ್​ಗಳಿಸಿ ಧೋನಿ ಔಟಾದ್ರು. ಕೊನೆಯಲ್ಲಿ ರೈನಾ ಹಾಗು ರವೀಂದ್ರ ಜಡೇಜಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಸುರೇಶ್​ ರೈನಾ ಅಜೇಯ 58 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.