ಎಂಜಾಯ್​ ಮಾಡ್ತಾ, RCBಗೆ ಚೀರ್​ ಮಾಡಿದ್ರು ಶಿವಣ್ಣ..!

 ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ IPL ಪಂದ್ಯವನ್ನು ಹ್ಯಾಟಿಕ್​ ಹೀರೊ ಶಿವರಾಜ್​ಕುಮಾರ್ ವೀಕ್ಷಿಸುತ್ತಿದ್ದಾರೆ. ಶಿವರಾಜ್​ ಕುಮಾರ್​ ಮೊದಲಿನಿಂದಲೂ ಕ್ರಿಕೆಟ್​ ಅಭಿಮಾನಿ. ಸದಾ ಬ್ಯುಸಿ ಶೂಟಿಂಗ್​ನಲ್ಲಿ ಮುಳುಗುವ ಶಿವಣ್ಣ, ಇಂದು ನಡೆಯುತ್ತಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯವನ್ನು ವೀಕ್ಷಿಸುತ್ತಾ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಇವರಿಗೆ ನಿರ್ಮಾಪಕ ಶ್ರೀಕಾಂತ್​​ ಸಾತ್​​ ನೀಡಿದ್ದಾರೆ.

‘ಪಂಜಾಬ್​ಗೆ 203 ರನ್​ಗಳ ಗುರಿ’
ಸತತ ಸೋಲು ಕಂಡಿದ್ದ ಆರ್​ಸಿಬಿ, ಕಳೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇಂದು ನಡೆಯುತ್ತಿರುವ ಪಂದ್ಯ ಡೂ ಆರ್​ ಡೈ ಪಂದ್ಯವಾಗಿದ್ದು, ಪ್ಲೇ ಆಫ್​ಗೆ ಸೆಲೆಕ್ಟ್​ ಆಗಲು RCBಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆರ್​ಸಿಬಿ ಎಬಿ ಡಿವಿಲಿಯರ್ಸ್  ಬಿರುಸಿನ ಆಟದಿಂದಾಗಿ 202 ರನ್​ ಕಲೆಹಾಕಿದ್ದು ಪಂಜಾಬ್​ ತಂಡಕ್ಕೆ 203 ರನ್​ಗಳ ಗುರಿ ನೀಡಿದೆ.