ಲ್ಯಾಂಬೋರ್ಗಿನಿ ಕಾರಿಗೆ 20 ಲಕ್ಷ ಡೈಮೆಂಡ್​ ಲೇಪನ..!

ರಷ್ಯಾ: ಸಾಮಾನ್ಯ ಜನರಿಗೆಲ್ಲ ವಜ್ರದ ಹರಳುಗಳನ್ನ ನೋಡೋಕೆ ಆಗಲ್ಲ. ಇನ್ನು ಧರಿಸೋದಂತೂ ಕನಸಿನ ಮಾತು. ಆದ್ರೆ, ರಷ್ಯಾದ ಇನ್​ಸ್ಟ್ರಾಗ್ರಾಂ ಮಾಡೆಲ್​ವೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಲ್ಯಾಂಬೋರ್ಗಿನಿ ಕಾರ್​ಗೂ ಡೈಮೆಂಡ್​​ ಹರಳುಗಳನ್ನ ಲೇಪಿಸಿ, ದೊಡ್ಡ ಸುದ್ದಿಯಾಗಿದ್ದಾಳೆ. ಮಾಡೆಲ್​ ಡೇರಿಯಾ ರೇಡಿಯನೋವಾ ತನ್ನ ಲಕ್ಷುರಿ ಕಾರ್​ಗೆ ಸ್ವರೋವಸ್ಕಿ ಡೈಮೆಂಡ್​ ಹರಳುಗಳನ್ನ ಲೇಪಿಸಿರೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿವೆ. ಇಡೀ ಕಾರಿಗೆ ಸುಮಾರು 2 ಮಿಲಿಯನ್ ಅಂದ್ರೆ, 20 ಲಕ್ಷ​ ಹರಳುಗಳನ್ನ ಅಂಟಿಸಲಾಗಿದ್ದು, ಇದನ್ನ ನೋಡಿದ ಜನ ಕಾರ್​ ಜೊತೆ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ. ಲಂಡನ್​ ಮೂಲದ ಟೀಂವೊಂದು ಸುಮಾರು 700 ಗಂಟೆಗಳಲ್ಲಿ ಈ ಕಾರ್​ಗೆ ನ್ಯೂ ಲುಕ್​ ತಂದಿದ್ದು, ಈ ಶೈನಿ ಕಾರ್​ ನೋಡಿದ ಜನತೆ ಬಾಯಿ ಮೇಲೆ ಬೆರಳಿಟ್ಟಿದೆ. ಈ ಹಿಂದೆಯೂ ಡೇರಿಯಾ ತನ್ನ ಮರ್ಸಿಡೀಸ್​ ಕಾರ್​ಗೂ ಇದೇ ರೀತಿ ಹರಳುಗಳನ್ನ ಅಂಟಿಸಿ ಸುದ್ದಿಯಾಗಿದ್ದಳು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv