ಸ್ವಿಮಿಂಗ್​​ಪೂಲ್‌ ತುದಿಯಲ್ಲಿ ಹಾಟ್ ಜೋಡಿಯ ಡೇಂಜರಸ್​ ಫೋಟೋ

ಬಹುಮಹಡಿ ಕಟ್ಟಡದ ಮೇಲೆ, ಬೆಟ್ಟದ ತುತ್ತ ತುದಿಯಲ್ಲಿ, ನೀರಿನ ಆಳದಲ್ಲಿ ಹೀಗೆ ನಾನಾ ರೀತಿಯ ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್​​ಟಾಗ್ರಾಂನಲ್ಲಿ ಅಪ್​ಲೋಡ್​​ ಮಾಡೋರು ಸಾಕಷ್ಟು ಜನ ಇದ್ದಾರೆ. ಇದು ಎಷ್ಟು ಅಪಾಯಕಾರಿ ಅಂತ ಗೊತ್ತಿದ್ದರೂ ಫಾಲೋವರ್ಸ್​ ಹಾಗೂ ಲೈಕ್ಸ್​ಗಾಗಿ ಅಪಾಯವನ್ನೂ ಲೆಕ್ಕಿಸದೇ ಇಂಥ ಹುಚ್ಚು ಸಾಹಸಕ್ಕೆ ಕೈ ಹಾಕ್ತಾರೆ. ಇದೇ ರೀತಿ ಇನ್‌ಸ್ಟಾಗ್ರಾಂನ ಫೇಮಸ್ ಜೋಡಿಯೊಂದು ಸ್ವಿಮಿಂಗ್ ಪೂಲ್‌ವೊಂದರ ತುದಿಯಲ್ಲಿ ಅಪಾಯಕಾರಿ ರೀತಿಯಲ್ಲಿ  ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದೀಗ ವೈರಲ್ ಆಗ್ತಿದೆ. ಈ ಹಾಟ್ ಕಪಲ್​​​, ಈಜುಕೋಳದ ಮಧ್ಯೆ ತೆಗೆಸಿಕೊಂಡಿರುವ ಫೋಟೋ ಬಗ್ಗೆ ಹಲವರು ಕಮೆಂಟ್ಸ್ ಮಾಡಿ ಟೀಕಿಸಿದ್ದಾರೆ.

ಬಾಲಿಯ ಉಬುದ್‌ನ ಕಯಾನ್ ಜಂಗಲ್ ರೆಸಾರ್ಟ್‌ನಲ್ಲಿ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಹಸಿರು ವಾತಾವರಣ, ನಿಸರ್ಗದ ಮಧ್ಯೆ ನಿರ್ಮಿಸಲಾದ ಸ್ವಿಮಿಂಗ್ ಪೂಲ್‌ನಲ್ಲಿ ಅತೀ ಎತ್ತಿರದ ಈಜುಕೋಳದ ನಡುವೆ ಈ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋ ನೋಡಿದಾಕ್ಷಣೆ ಮೈನವಿರೇಳುತ್ತದೆ. ಕೋಡಿ ಎಂಬಾತ ತನ್ನ ಗರ್ಲ್​​ಫ್ರೆಂಡ್​ ಕೆಲ್ಲಿಯನ್ನ ಕೊಳದ ಹೊರಗಡೆ ಹಿಡಿದುಕೊಂಡು ಕಿಸ್​ ಮಾಡುತ್ತಿರೋದನ್ನ ಕಾಣಬಹುದು. ಕೆಲ್ಲಿ ಕೂಡ  ಧೈರ್ಯದಿಂದಲೇ ಪೂಲ್​​ ಹೊರಗೆ ತೂಗಾಡುತ್ತಾ ಪೋಸ್​ ಕೊಟ್ಟಿದ್ದಾಳೆ.

ಜೋಡಿ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ತಮ್ಮ ಮಧ್ಯೆ ಇರುವ ಪ್ರೀತಿ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸಿದ್ದಾರೆ. ಮತ್ತೊಂದೆಡೆ ಈ  ಡೇಜಂರಸ್ ಹಾಗೂ ಮೂರ್ಖತನದ ನಡೆಗೆ ಹಲವರು ಕಮೆಂಟ್ ಮಾಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.

View this post on Instagram

Seize the day with a beautiful view from our amazing pool. Thank you @la_la_la_lara for having a good time with us💕 #trulyubud ••••• Get special rate through our website with our promo code : TKJRIG18 thekayonjungleresort.com Resort for Adult Only ••••• The Kayon Jungle Resort Member of @pramanahotels  Managed by @pramanaexperience ••• #trulykayon #kayonubud #kayonresort #kepiturestaurant #pramanahotels #natureview #naturelover #wonderfulindonesia #bestdestinationwedding #honeymoon #romantichotel #explorebali #bali #visitbali #thebaliguideline #balidaily #baligasm #balilife #ubud #thebalibible #balibible #lovetotravel #traveltheworld #wonderfulhotel

A post shared by The Kayon Jungle Resort (@kayonjungleresort) on