ರಷ್ಯಾದಲ್ಲಿ ನಡೆಯುತ್ತೆ ಕಪಾಳಕ್ಕೆ ಹೊಡೆಯೋ ಕಾಂಪಿಟೇಷನ್

ಕುಸ್ತಿ, ಕತ್ತಿ ವರಸೆ, ಮಲ್ಲ ಯುದ್ಧ ಹೀಗೆ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ತಮ್ಮ ಶಕ್ತಿ ಪ್ರದರ್ಶನ ಮಾಡೋದನ್ನ ನೋಡಿರ್ತಿರ. ಆದ್ರೆ ಕಪಾಳಕ್ಕೆ ಬಾರಿಸೋ ಒಂದು ಕಾಂಪಿಟೇಷನ್ ​ಇದ್ರೆ ಯಾವ ರೀತಿ ಬಾರಿಸಬಹುದು ಊಹಿಸಿಕೊಳ್ಳಿ. ಹೌದು, ಇಂಥದ್ದೊಂದು ವಿಚಿತ್ರ ಕಾಂಪಿಟೇಷನ್ ರಷ್ಯಾದಲ್ಲಿ ನಡೆಯುತ್ತೆ. ಕಳೆದ ಮಾರ್ಚ್​​​ನಲ್ಲಿ ಮೊದಲ ಬಾರಿಗೆ ಕ್ರಾಸ್​​ನೋಯಾರ್ಸ್ಕ್​​​​​ನಲ್ಲಿ ವಾರ್ಷಿಕ ಸೈಬೀರಿಯನ್ ಪವರ್​ ಶೋ ಭಾಗವಾಗಿ ಪುರುಷರ ಕಪಾಳಕ್ಕೆ ಹೊಡೆಯೋ ಕಾಂಪಿಟೇಷನ್ ಆಯೋಜಿಸಲಾಗಿತ್ತು. ಇದೀಗ ಈ ಸ್ಪರ್ಧೆ ಸಿಕ್ಕಾಪಟ್ಟೆ ಪಾಪ್ಯುಲರ್ ಆಗ್ತಿದೆ.

ಹೆಸರೇ ಸೂಚಿಸುವಂತೆ ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪರಸ್ಪರ ಕಪಾಳಕ್ಕೆ ಹೊಡೆಯಬೇಕು. ಇಬ್ಬರು ಪುರುಷರು ಎದುರುಬದುರಾಗಿ ನಿಂತು ಕೆನ್ನೆಗೆ ಬಾರಿಸಬೇಕು. ಇದರಲ್ಲಿರೋ ಒಂದೇ ಒಂದು ಕಂಡೀಷನ್ ಅಂದ್ರೆ ಸ್ಪರ್ಧಿಗಳು ಫೇಸ್​​ ಟು ಫೇಸ್​ ನೋಡಬೇಕು, ಏಟನ್ನು ತಪ್ಪಿಸಿಕೊಳ್ಳಲು ಯತ್ನಿಸಬಾರದು. ಇಬ್ಬರಲ್ಲಿ ಯಾವ ಸ್ಪರ್ಧಿ ನನ್ನಿಂದ ಆಗಲ್ಲ ಅಂತ ಕೈಚೆಲ್ಲುತ್ತಾನೋ ಆತ ಸೋತಂತೆ. ಅಲ್ಲಿಯವರೆಗೂ ಕಪಾಳಕ್ಕೆ ಬಾರಿಸೋದು ನಿಲ್ಲೋದಿಲ್ಲ. ಅಥವಾ ರೆಫರಿ ಈ ಸ್ಪರ್ಧೆಯನ್ನ ನಿಲ್ಲಿಸೋವರೆಗೂ ಕಪಾಳಮೋಕ್ಷ ಮುಂದುವರೆಯುತ್ತೆ. ಇದರಲ್ಲಿ ಯಾವುದೇ ಪಾಯಿಂಟ್ಸ್​ ಅಥವಾ ಟೈಂ ಲಿಮಿಟ್​ ಇರೋದಿಲ್ಲ.

ಇನ್ನು ಕಳೆದ ಸ್ಪರ್ಧೆಯಲ್ಲಿ ವಸಿಲಿ ಕಮೋಟ್​​ಸ್ಕೀ ಎಂಬಾತ ಗೆಲುವು ಸಾಧಿಸಿದ್ದು, 30 ಸಾವಿರ ರಷ್ಯನ್ ರೂಬೆಲ್​​( ಅಂದಾಜು ₹32 ಸಾವಿರ) ಹಣವನ್ನ ಬಹುಮಾನವಾಗಿ ಪಡೆದಿದ್ದಾನೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv