ಇನ್ನೋವಾ ಕಾರ್​-ಬೈಕ್​ ಮುಖಾಮುಖಿ, ಬೈಕ್​ ಸವಾರ ಸಾವು

ಕಲಬುರ್ಗಿ: ಇನ್ನೋವಾ ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಅಫಜಲಪುರ ‌ತಾಲೂಕಿನ ತಾಂಡಾ ಬಳಿಯ ಅಫಜಲಪುರ-ಬಳ್ಳೂರ್ಗಿ ರಸ್ತೆಯಲ್ಲಿ ನಡೆದಿದೆ. ಮೃತನನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲೂಕಿನ ಜಟಾಪೂರ ಗ್ರಾಮದ ನಿವಾಸಿ ಮಾಳಪ್ಪ ಹಳ್ಳಗಿ (21) ಅಂತಾ ಗುರುತಿಸಲಾಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌‌ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv