ಮಾನಸಿಕ ಅಸ್ವಸ್ಥ ಮಗನನ್ನು ನಾಲ್ಕು ವರ್ಷದಿಂದ ಕೂಡಿ ಹಾಕಿದ ತಂದೆ.!

ಹಾವೇರಿ: ಮಾನಸಿಕ ಅಸ್ವಸ್ಥ ಮಗನನ್ನು ನಾಲ್ಕು ವರ್ಷಗಳಿಂದ ಸ್ವತಃ ತಂದೆಯೇ ಕೂಡಿ ಹಾಕಿರುವ ಅಮಾನವೀಯ ಘಟನೆ ಹಾನಗಲ್​ ತಾಲೂಕಿನ ಆಡೂರನಲ್ಲಿ ಗ್ರಾಮದಲ್ಲಿ ನಡೆದಿದೆ.
ಆಡೂರು ಗ್ರಾಮದ ರೇವಣಸಿದ್ದಪ್ಪ ಎಂಬಾತನೇ ತನ್ನ ಮಗ ಸಿದ್ದಪ್ಪನನ್ನು ನಾಲ್ಕು ವರ್ಷದಿಂದ ಮನೆಯಲ್ಲಿ ಕೂಡಿ ಹಾಕಿದ್ದಾನೆ.

2002ರಲ್ಲಿ ಸಿದ್ದಪ್ಪ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಎಂ​.ಕಾಂ. ಓದುತ್ತಿದ್ದ. ವಿದ್ಯಾಭ್ಯಾಸದಲ್ಲಿ ಮಗ ಪ್ರತಿಭಾವಂತ ಆಗಿದ್ದನು. ಆದ್ರೆ, ಸಿದ್ದಪ್ಪ ಕಾಲೇಜು ಓದುವ ಸಮಯದಲ್ಲಿ ಬೆಂಗಳೂರಿಗೆ ಹೋದಾಗ ದಾಖಲಾತಿಗಳನ್ನ ಕಳೆದುಕೊಂಡಿದ್ದ. ದಾಖಲಾತಿಗಳು ಕಳೆದು ಹೋಗಿದ್ದರಿಂದಾಗಿ ಮಾನಸಿಕ ಅಸ್ವಸ್ಥನಾದ ಅನ್ನೋದು ಕುಟುಂಬ ಸದಸ್ಯರ ಮಾತು. ಮಾನಸಿಕವಾಗಿದ್ದ ಸಿದ್ದಪ್ಪನನ್ನು ನಾಲ್ಕು ವರ್ಷಗಳಿಂದ ಮನೆಯಲ್ಲಿ ಕೂಡಿ ಹಾಕಲಾಗಿದೆ. ಸಾರ್ವಜನಿಕರು ಹಾಗೂ ಸ್ಥಳೀಯ ಪೊಲೀಸರ ಸಹಾಯದಿಂದ ಬಂಧನದಿಂದ ಮುಕ್ತಗೊಳಿಸಿ ಸಿದ್ದಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv