ಪರಿಹಾರ ನೀಡುವಲ್ಲಿ ತಾರತಮ್ಯ ವಿರೋಧಿಸಿ ರೈತರ ಪ್ರತಿಭಟನೆ.

ಹುಬ್ಬಳ್ಳಿ: ಸರ್ಕಾರ ಭೂ ಪರಿಹಾರ ನೀಡುವಲ್ಲಿ ವಿವಿಧ ಗ್ರಾಮಗಳ ರೈತರಿಗೆ ಹೆಚ್ಚಿನ ಪರಿಹಾರ ಕೂಟ್ಟು ಹಾಗೂ ಇನ್ನು ಕೆಲವು ಗ್ರಾಮಗಳ ರೈತರಿಗೆ ಕಡಿಮೆ ಪರಿಹಾರ ನೀಡಿದ್ದನ್ನು ವಿರೋಧಿಸಿ ಅಂಕೋಲಾ- ಹೊಸಪೇಟೆ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಭಂಡಿವಾಡ ಕ್ರಾಸ್ ಬಳಿ ಹೆದ್ದಾರಿ ತಡೆದು ಶಿರಗುಪ್ಪಿ, ಭಂಡಿವಾಡ, ಮಂಟೂರು ಸೇರಿದಂತೆ ವಿವಿಧ ಗ್ರಾಮದ ರೈತರು ಪ್ರತಿಭಟನೆ ಪಾಲ್ಗೂಂಡಿದ್ದರು. ರಾಜ್ಯ, ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತವಾದ ಪರಿಹಾರ ನೀಡುವಂತೆ ರೈತರು ಆಗ್ರಹ ಮಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv