ಶುಂಠಿ ನೀರಿನ ಹೆಲ್ತ್​​ ಬೆನಿಫಿಟ್ಸ್​ !

ಪುರಾತನ ಆಹಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಉತ್ತಮ ಆರೋಗ್ಯಕ್ಕೆ ಶುಂಠಿಯನ್ನು ಉಪಯೋಗಿಸಲಾಗುತ್ತದೆ. ಮೂಲತಃ ಆಗ್ನೇಯ ಏಷ್ಯಾದ ಈ ಸಸ್ಯ ಸಾವಿರಾರು ವರ್ಷಗಳಿಂದ ಭಾರತದಲ್ಲಿಯೂ ಅಡುಗೆಗಳಲ್ಲಿ ಹಾಗೂ ಔಷಧೀಯ ರೂಪದಲ್ಲಿ ಬಳಕೆಯಾಗುತ್ತಿದೆ. ಶುಂಠಿ ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಸಾಮರ್ಥ್ಯ ಹೊಂದಿದೆ. ಇದನ್ನು ಸಾಂಬಾರ್​ ಪದಾರ್ಥವನ್ನಾಗಿಯೂ ಉಪಯೋಗಿಸುತ್ತೇವೆ. ಶುಂಠಿ ನೀರು, ಶುಂಠಿ ಚಹಾ, ಅಡುಗೆಯಲ್ಲಿ ಶುಂಠಿ ಬಳಕೆ ಹೀಗೆ ನಾನಾ ರೀತಿಯಲ್ಲಿ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ.

100 ಗ್ರಾಂ ಹಸಿಶುಂಠಿಯಲ್ಲಿ ಏನೆಲ್ಲಾ ಇದೆ? 

1. ಸಕ್ಕರೆ ಅಂಶ ಇಲ್ಲ.
2. 79 ಕ್ಯಾಲೋರಿ.
3. 1.15 ಗ್ರಾಂ, ಐರನ್.
4. 3.57 ಪ್ರೋಟೀನ್.
5. 14 ಮಿಲಿ, ಗ್ರಾಂ ಫೈಬರ್.
6. 3.6 ಗ್ರಾಂ dietary ಫೈಬರ್.
7. 17.86 ಗ್ರಾಂ. ಕಾರ್ಬೋಹ್ರೈಡ್ರೇಟ್.

ಶುಂಠಿಯ ಹೆಲ್ತ್ ಬೆನಿಫಿಟ್ಸ್ :

ಜೀರ್ಣಕ್ರಿಯೆ: ಅನಾರೋಗ್ಯಕರ ಜೀವನಶೈಲಿ, ಒತ್ತಡದ ಮಧ್ಯೆ ಹಲವರಿಗೆ ಸ್ಥೂಲಕಾಯ ಹೆಚ್ಚುತ್ತಿದೆ. ಉತ್ತಮ ಆಹಾರ, ವ್ಯಾಯಾಮ, ಜೀವನಶೈಲಿ ಜತೆಗೆ ತೂಕವನ್ನು ಕಡಿಮೆ ಮಾಡಲು ಶುಂಠಿ ನೀರು ಸಹಾಯ ಮಾಡುತ್ತದೆ. ಊಟ ಆದ ನಂತರ ಒಂದು ಕಪ್ ಬಿಸಿ ಶುಂಠಿ ನೀರು ಕುಡಿದರೆ ತುಂಬಾ ಪ್ರಯೋಜನವಿದೆ. ಇದು ಅತಿಯಾದ ಆಹಾರ ಸೇವನೆ ತಪ್ಪಿಸಿ, ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಶುಂಠಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಶುಂಠಿ ಸೇವನೆಯಿಂದ ಮೈಗ್ರೇನ್  ಕೂಡ ತಡೆಗಟ್ಟಬಹುದು.

ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ: ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಪ್ರತಿನಿತ್ಯ ಒಂದು ಕಪ್ ಶುಂಠಿ ನೀರು ಕುಡಿಯುವುದರಿಂದ ಚರ್ಮದಲ್ಲಿ ಕಾಂತಿ ಕಾಣಬಹದು. ಚರ್ಮ ಹೊಳೆಯುವಲ್ಲಿ ಇದು ಸಹಾಯಕಾರಿ. ಇನ್ನೂ ಶುಂಠಿಯಲ್ಲಿ ವಿಟಮಿನ್ ಎ ಹಾಗೂ ಸಿ ಅಂಶ ಅಧಿಕವಾಗಿದೆ. ಇದು ಕೂದಲಿನ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ. ಶುಂಠಿ ಬ್ಯಾಕ್ಟೇರಿಯಾಗಳನ್ನು ನಿವಾರಿಸಿ, ರಕ್ತವನ್ನು ಶುದ್ಧಿಕರಿಸುತ್ತದೆ. ಮೊಡವೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತಡೆಯುತ್ತದೆ.

ಹೃದಯವನ್ನು ಬಲಪಡಿಸುತ್ತದೆ: ಶುಂಠಿ ಹೃದಯವನ್ನು ಬಲಪಡಿಸುತ್ತದೆ. ಮೂತ್ರಪಿಂಡದ ಕಾಯಿಲೆಗಳನ್ನ ನಿಯಂತ್ರಿಸುತ್ತದೆ. ಮರೆವಿನ ಕಾಯಿಲೆ, ಮೆದುಳಿಗೆ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಅಲ್ಲದೆ ಈ ಕಾಯಿಲೆಯಿಂದ ಬಳುತ್ತಿರುವವರು, ಪ್ರತಿ ದಿನ ಶುಂಠಿ ನೀರನ್ನು ಸೇವಿಸಬೇಕು. ಇನ್ನು ಕ್ಯಾನ್ಸರ್ ರೋಗಿಗಳ ಮೇಲೂ ಶುಂಠಿ ಪಾಸಿಟಿವ್ ಪರಿಣಾಮ ಬೀರುತ್ತದೆ.

ಉರಿಯೂತ ನಿಯಂತ್ರಣ: ಕಳಪೆ ಆಹಾರ, ಜೀವನಶೈಲಿ, ದೇಹದಲ್ಲಿನ ಸೂಕ್ಷ್ಮಜೀವಿಗಳು ಹೆಚ್ಚಿನ ಉರಿಯೂತಕ್ಕೆ ಕಾರಣವಾಗುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿ ನೀರು ಅಲರ್ಜಿಯನ್ನು ನಿವಾರಿಸುತ್ತದೆ. ಊರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೀರ್ಘಕಾಲ ಜಿಮ್‌ನಲ್ಲಿ ವರ್ಕೌಟ್‌ ಮಾಡಿ ಮಸಲ್ ಪೇನ್‌ ಎದುರಿಸುತ್ತಿದ್ದರೆ, ಒಂದು ಕಪ್ ಬಿಸಿ ಶುಂಠಿ ನೀರನ್ನು ಸೇವಿಸಿದ್ರೆ ರಿಲೀಫ್ ಸಿಗುತ್ತದೆ.

ಎನರ್ಜಿ: ಆ್ಯಕ್ಟಿವ್ ಎನರ್ಜಿಯಿಂದ ಇರಲು, ಶುಂಠಿ ಪ್ರಯೋಜನಕಾರಿಯಾಗಿದೆ. ವಾಕರಿಕೆ, ಅಜೀರ್ಣ, ವಾಂತಿ ಮುಂತಾದವುಗಳಿಂದ ಬಳಲುತ್ತಿದ್ದರೆ ಶುಂಠಿ ನೀರನ್ನು ನಿಯಮಿತವಾಗಿ ಸೇವನೆ ಮಾಡವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟಬಹುದು. ಅಲ್ಲದೆ ಶುಂಠಿ ನೀರನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ದೇಹವನ್ನು ಹೈಡ್ರೇಟ್ ಮಾಡುತ್ತದೆ.

ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ: ಕಡಿಮೆ ಬ್ಲಡ್ ಶುಗರ್ ಲೆವಲ್‌ಗೆ ಶುಂಠಿ ಸಹಾಯ ಮಾಡುತ್ತದೆ. ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿರುವವರು. ಶುಂಠಿಯ ನೀರನ್ನು ಕುಡಿಯುತ್ತಿದ್ದರೆ, ಬ್ಲಡ್ ಶುಗರ್‌ ನಿಯಂತ್ರಿಸಬಹುದು. ಆದ್ರೆ ಆಹಾರದಲ್ಲಿ ಬದಲಾವಣೆ ಹಾಗೂ ಶುಂಠಿ ಸೇವಿಸುವುದಕ್ಕೂ ಮುನ್ನ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳುವುದು ಉತ್ತಮ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಶುಂಠಿಪುಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ನಿಯಮಿತ ಶುಂಠಿ ಸೇವನೆಯಿಂದ ಆರೋಗ್ಯ ಲಾಭಗಳನ್ನು ಹೆಚ್ಚಿಸಿಕೊಳ್ಳಬಹುದು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv