ವೈರಲ್ ಆಯ್ತು ಡಿಸಿಎಂ ಪರಮೇಶ್ವರ್ ಕಣ್ಣೀರ ಧಾರೆ ವಿಡಿಯೋ…

ತುಮಕೂರು: ಮಧುಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಹಾಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕಣ್ಣೀರು ಹಾಕಿದ್ದರು. ಈ ವಿಡಿಯೋ ಈಗ ವೈರಲ್​ ಆಗಿದೆ. ಮಧುಗಿರಿ ತಾಲೂಕಿನ ಬಂದ್ರೆಹಳ್ಳಿಯಲ್ಲಿ ಪ್ರಚಾರದ ವೇಳೆ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡು ಪರಮೇಶ್ವರ್ ಅವರು ಕಣ್ಣೀರು ಹಾಕಿದ್ದರು. ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನ ಕಾರ್ಯಕರ್ತರ ಮುಂದೆ ಹಂಚಿಕೊಂಡಿದ್ದರು. ನಾನು 1989ರಲ್ಲಿ ಮಧುಗಿರಿಗೆ ಬಂದಿದ್ದೆ. ಆಗ ನನಗೆ ಯಾರೂ ಪರಿಚಯವಿರಲಿಲ್ಲ. ಆ ಸಮಯದಲ್ಲಿ ನಾಗರಾಜು, ನರಸಿಂಹಯ್ಯ, ನಾರಾಯಣ ರೆಡ್ಡಿ, ಜಿಜೆ ರಾಜಣ್ಣ ಮೊದಲಾದವರು ನನ್ನ ನೆರವಿಗೆ ಬಂದರು. ನನ್ನನ್ನು ನಂಬಿ ಅವರು ನನ್ನ ಗೆಲವುವಿಗೆ ಶ್ರಮಿಸಿದ್ದರು ಎಂದು ನೆನಪು ಮಾಡಿಕೊಂಡರು.
ಚುನಾವಣೆ ಪ್ರಚಾರದ ವೇಳೆ ನಾಗರಾಜಪ್ಪ ಮತ್ತು ಇತರರೊಂದಿಗೆ ಕೆರೆ ಏರಿಯ ಮನೆಗಳಿಗೆ ಹೋಗುವಾಗ ನನಗೆ ನಾಗರಾಜಪ್ಪ ಹೇಳಿದ್ರು, ಅಯ್ಯೋ ಪಾಪಿ ನಿನಗ್ಯಾಕೆ ಬಂತು ಇಂಥ ಕಷ್ಟ? ಫಾರಿನ್​​ನಲ್ಲಿ ಓದಿ ಕಾಡು ಮೇಡು ಸುತ್ತುತ್ತಿದ್ದೀಯಲ್ಲ ಎಂದು ಕೇಳಿದ್ದರು. ಈ ಎಲ್ಲ ನೆನಪುಗಳನ್ನು ಭಾವುಕರಾಗಿ ಪರಮೇಶ್ವರ್​ ಅವರು ಹೊರ ಹಾಕಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv