ಮೈಸೂರು ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು: ಸುಧಾ ಮೂರ್ತಿ

ಮೈಸೂರು: ಸಂಸ್ಕೃತಿಯ ಪ್ರತಿ ಬಿಂಬ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು ನನ್ನ ಪೂರ್ವಜನ್ಮದ ಪುಣ್ಯ. ಅವಿರೋಧವಾಗಿ ನಾನು ಆಯ್ಕೆಯಾಗಿದ್ದು ಅತೀವ ಸಂತಸ ತಂದಿದೆ ಎಂದು ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.

ನಾಡಹಬ್ಬ ಮೈಸೂರು ದಸರಾವನ್ನ ಉದ್ಘಾಟಿಸಿದ ನಂತರ ಮಾತನಾಡಿದ ಅವರು,  ಕನ್ನಡ ಜನತೆಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ್ರು. ಮೈಸೂರಿನ ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು. ಮೈಸೂರಿನ ಅರಸರು ಇಲ್ಲದಿದ್ರೆ ನಮ್ಮ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು ಎಂದು ಸುಧಾ ಮೂರ್ತಿ ಹೇಳಿದ್ರು.

ದಸರಾ ಶತಮಾನಗಳಿಂದ ಆಚರಿಸುತ್ತಿರೋ ಹಬ್ಬ. ಕರ್ನಾಟಕ ಸರ್ಕಾರ ದಸರಾವನ್ನ ಅತ್ಯಂತ ಉತ್ತಮವಾಗಿ ಆಚರಿಸಿಕೊಂಡು ಬರುತ್ತಿದೆ. ಪಂಪ ಹೇಳುವಂತೆ ಕನ್ನಡ ಇಷ್ಟ. ಕನ್ನಡ ನಾಡಿನಲ್ಲಿ ಮತ್ತೆ ಮತ್ತೆ ಹುಟ್ಟುವಾಸೆ. ಕರ್ನಾಟಕದಲ್ಲಿ ಮರು ಜನ್ಮ ಹೊಂದುವ ಹೆಬ್ಬಯಕೆ ನನಗಿದೆ ಎಂದು ಹೇಳಿದ್ರು.

ಸರ್ಕಾರ ದಸರಾವನ್ನು ನಾಡಹಬ್ಬವಾಗಿ ಆಚರಿಸುತ್ತಿದೆ. ನಾಡಿನ ಶ್ರೇಷ್ಠ ಆಚರಣೆಯನ್ನಾಗಿ ಮಾಡಿದೆ ಎಂದು ಹೇಳಿದ ಅವರು,  ಆಡದೆ ಮಾಡುವವನು ಉತ್ತಮ, ಆಡಿ ಮಾಡುವವನು ಮಧ್ಯಮ,ಆಡದೆಯೂ ಮಾಡದವನು ಅದಮ ಎಂದು ವಚನಗಳನ್ನು ವಾಚಿಸಿದ್ರು.

25 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಡಗಿನ ಜನರಿಗೆ ಮನೆ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಸರ್ಕಾರದಿಂದ ಸವಲತ್ತು ಕೊಟ್ರೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕೊಡಗಿನ ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದ್ರು. ಇನ್ಫೋಸಿಸ್ ಪ್ರತಿಷ್ಠಾನದ ಕೆಲಸಗಳು ಉಪಕಾರವಲ್ಲ. ನಮ್ಮ ಕರ್ತವ್ಯ. ಇದು ದಾನದ ಕೆಲಸ. ನಮ್ಮ ಪ್ರತಿಷ್ಠಾನದ ವತಿಯಿಂದ ನೊಂದ ಕೊಡಗಿನವರಿಗೆ ಸಹಾಯ ಮಾಡಬೇಕು. ನಂತರ ಮೈಸೂರಿನ ಹೆಬ್ಬಾಳ ಕೆರೆ ಪ್ರದೇಶ ಅಭಿವೃದ್ಧಿಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv