ಯೋಧರ ಕುಟುಂಬಕ್ಕೆ ತಲಾ 10ಲಕ್ಷ, ಜೀವದ ಮುಂದೆ ಹಣ ಯಾವ ಲೆಕ್ಕವೂ ಅಲ್ಲ -ಸುಧಾಮೂರ್ತಿ

ಬೆಂಗಳೂರು: 40 ಯೋಧರ ಮರಣ.. ಅದು ದೇಶಕ್ಕಾದ ಬಲಿದಾನ. ಸಾಕಷ್ಟು ಜನ ಯುವಕರು ಯೋಧರಾಗಬೇಕು ಅಂದುಕೊಂಡಿದ್ದಾರೆ. ಅವರೆಲ್ಲರೂ ಈಗ ಧೈರ್ಯದಿಂದ ಫೈಟ್ ಮಾಡಬೇಕು ಅಂತಾ ಇನ್ಫೋಸಿಸ್ ಫೌಂಡೇಶನ್​​ ಮುಖ್ಯಸ್ಥೆ ಸುಧಾಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಪುಲ್ವಾಮ ದಾಳಿ ಕುರಿತಂತೆ ಮಾತನಾಡಿದ ಅವರು, ಯೋಧರ ವೀರ ಮರಣವಾಗಿದೆ. ಹೀಗಾಗಿ ಸದ್ಯ ಹಣದ ಬಗ್ಗೆ ಮಾತನಾಡಲು ಬೇಸರವಾಗುತ್ತೆ. ಕಳೆದುಕೊಂಡ ಮೇಲೆ ಧೈರ್ಯದ ನುಡಿ ಸಾಂತ್ವನ ಇದಿಷ್ಟೇ ಹೇಳಲು ಸಾಧ್ಯ. ಅವರ ಕುಟುಂಬದವರಿಗೆ, ಪರ್ಸನಲಿ ತುಂಬಾ ಲಾಸ್ ಆಗಿರುತ್ತೆ. ಆದರೆ ದೇಶಕ್ಕೆ ಅವರ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಈ ಹಿನ್ನೆಲೆ ಆ ಕುಟುಂಬ ಹೆಮ್ಮೆ ಪಡಬೇಕು ಅಂತಾ ಹೇಳಿದರು.

ಯೋಧರ ಕುಟುಂಬಕ್ಕೆ ತಲಾ 10 ಲಕ್ಷ
ಹುತಾತ್ಮ ಯೋಧರ ಕುಟುಂಬಕ್ಕೆ ಇನ್​ಫೋಸಿಸ್​ ಫೌಂಡೇಶನ್​ ವತಿಯಿಂದ ತಲಾ 10 ಲಕ್ಷ ಧನ ಸಹಾಯ ಮಾಡಿದ್ದಾರೆ. ಈ ಕುರಿತಂತೆ ಮಾತಾಡಿದ ಸುಧಾಮೂರ್ತಿ, ಇನ್​ಫೋಸಿಸ್​ ಫೌಂಡೇಶನ್​ ವತಿಯಿಂದ ಕಡೆಯಿಂದ ಒಂದಿಷ್ಟು ಸಹಾಯಧನ ಮಾಡಿದ್ದೇವೆ. ಆದ್ರೆ ಜೀವದ ಮುಂದೆ ಹಣ ಯಾವ ಲೆಕ್ಕವೂ ಅಲ್ಲ ಅಂತಾ ಹೇಳಿದರು.

ಇದೇ ವೇಳೆ, ಇದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿರೋದು ತುಂಬಾ ಸಂತಸ ತಂದಿದೆ. ಸಾಹಿತ್ಯ ಅಂದ್ರೆ ಅದು‌ ಕೇವಲ ಪದಗಳಲ್ಲ. ಇಟ್ಸ್ ಅನ್​​ ಎಮೋಷನ್ ಆಫ್ ಥಾಟ್ಸ್. ನನಗೆ ಕೃತಿ ಮೇಲೆ ಅಪಾರ ನಂಬಿಕೆ. ನಾ ಬರೆಯೋ ಪದಗಳ ಮೇಲೆ ಪ್ರೀತಿ. ಹೀಗಾಗಿ ಈ ಅಧ್ಯಕ್ಷತೆ ತುಂಬಾ ಖುಷಿಕೊಟ್ಟಿದೆ ಅಂತಾ ಸುಧಾಮೂರ್ತಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv