ಬಸವರಾಜ್ ಹೊರಟ್ಟಿ ಸರ್ಕಾರ ವಿಸರ್ಜಿಸಬೇಕೆಂದು ಹೇಳಿದ್ದಾರೆ: ಯಡಿಯೂರಪ್ಪ

ಹುಬ್ಬಳ್ಳಿ: ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಸರ್ಕಾರ ವಿಸರ್ಜಿಸಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನೊಂದೆಡೆ ಹೆಚ್​.ವಿಶ್ವನಾಥ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿನ ಗೊಂದಲ‌ ಉಲ್ಬಣಗೊಂಡಿದೆ ಎಂದು ಯಡಿಯೂರಪ್ಪ  ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಮದಿಗೆ ಮಾತನಾಡಿದ ಅವರು, ಸರ್ಕಾರ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಸರ್ಕಾರ ವಿಸರ್ಜನೆ ಸುಲಭದ‌ ಕೆಲಸವಲ್ಲ.
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಿಗೆ ಸೇರಿ ಕ್ಯಾಬಿನೆಟ್‌ನಲ್ಲಿ ಬಹುಮತದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ. ಕಾಂಗ್ರೆಸ್ ವಿರೋಧಿಸಿದ್ರೆ ಕೇವಲ ಜೆಡಿಎಸ್‌ನಿಂದ ವಿಸರ್ಜನೆ ಮಾಡಕ್ಕೆ ಬರಲ್ಲ.ಇದಕ್ಕೆ ಕಾನೂನಿನ ತೊಡಕು ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಮನಸ್ಸಿನಲ್ಲೇನಿದೆ, ಏನಾಗುತ್ತೆ ಕಾದು ನೋಡೋಣ. ಒಟ್ಟಾರೆ ಇದೆಲ್ಲದರ ಅರ್ಥ ಲೋಕಸಭಾ ಚುನಾವಣೆ ಮೈತ್ರಿಗೆ ತಿರುಗು ಮುರುಗಾಗುತ್ತೆ ಅನ್ನೋದು‌ ಸ್ಪಷ್ಟವಾಗುತ್ತಿದೆ. ಇನ್ನು ಕಾಂಗ್ರೆಸ್ ಅತಿರಥ ಮಹಾರಥರು ಸೋಲುತ್ತಿದ್ದಾರೆ. ಇದೆಲ್ಲದರಿಂದ ಕಾಂಗ್ರೆಸ್, ಜೆಡಿಎಸ್‌ ಗೊಂದಲದ ಗೂಡಾಗಿದೆ. ಹೀಗಾಗಿ ಆ ಪಕ್ಷಗಳ ನಾಯಕರು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಅಂತಾ ಯಡಿಯೂರಪ್ಪ ಮೈತ್ರಿಪಕ್ಷಗಳ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv