ಕಳ್ಳನ ಬಾಯ್ಬಿಡಿಸಲು ಮೈ ಮೇಲೆ ಹಾವು ಬಿಟ್ಟ ಪೊಲೀಸರು..!

ಕಳ್ರನ್ನ ಹಿಡಿಯೋದು ಅಷ್ಟು ಸುಲಭ ಅಲ್ಲ. ಹಿಡಿದ್ಮೇಲೂ ಅಷ್ಟು ಸುಲಭವಾಗಿ ಆರೋಪಿ ತಾನು ಕಳ್ಳ ಅಂತಾ ಒಪ್ಕೊಳ್ಳೋದೇ ಇಲ್ಲ. ಅದ್ಕೆ ಪೊಲೀಸ್ರು ನಾನಾ ತಂತ್ರ ಮಾಡ್ತಾರೆ. ಇಷ್ಟು ದಿನ ಪ್ರಕರಣ ಭೇದಿಸ್ಬೇಕು ಅಂತಾ ಪೊಲೀಸರು ಆರೋಪಿಗಳಿಗೆ ಬೆಂಡ್​ ಎತ್ತೋದನ್ನ ಕೇಳಿದ್ವಿ. ಕರೆಂಟ್​ ಶಾಕ್ ಕೊಟ್ಟಿರೋದ್ರ ಬಗ್ಗೆಯೂ ಕೇಳಿದ್ದೀವಿ. ಮಂಪರು ಪರೀಕ್ಷೆಗೆ ಒಳಪಡಿಸಿರೋ ನಿದರ್ಶನಗಳಿವೆ. ಬ್ಲ್ಯಾಕ್​ ಮೇಲ್​ನಂಥ ಅದೆಷ್ಟೋ ಐಡಿಯಾಗಳನ್ನ ಮಾಡಿರೋದನ್ನ ನೋಡಿದ್ದೀವಿ. ಆದ್ರೆ ಇಂಡೋನಿಷ್ಯಾದ ಪಪುವಾದಲ್ಲಿ ಪೊಲೀಸ್ರು ಕಳ್ಳನ ಬಾಯ್ಬಿಡಲು ಸ್ವಲ್ಪ ಡಿಫ್ರೆಂಟ್​ ಆಗಿ ಯೋಚ್ನೆ ಮಾಡಿದ್ದಾರೆ.

ವ್ಯಕ್ತಿಯೊಬ್ಬ ಮೊಬೈಲ್​​ ಕದ್ದಿದ್ದಾನೆ ಅನ್ನೋ ಶಂಕೆ ಮೇಲೆ ಆತನನ್ನು ಅರೆಸ್ಟ್​ ಮಾಡಿ ಕರೆತಂದಿದ್ದ ಪೊಲೀಸ್ರು, ತೀವ್ರ ತನಿಖೆ ಮಾಡಿದ್ದಾರೆ. ಆದ್ರೆ ಆತ ಬಾಯ್ಬಿಡದಿದ್ದಾಗ ಹಾವೊಂದನ್ನ ಹಿಡ್ಕೊಂಡು ಬಂದು ಆತನ ಮೇಲೆ ಬಿಟ್ಟಿದ್ದಾರೆ. ಕೊಣೆಯೊಂದ್ರಲ್ಲಿ ಕೂರಿಸಿಕೊಂಡು ವಿಚಾರಣೆ ನಡೆಸ್ತಾ ನಡೆಸ್ತಾ ಆನತ ಮೈಮೇಲೆ ಹಾವನ್ನ ಬಿಟ್ಟು ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಎಷ್ಟು ಸಲ, ಎಷ್ಟು ಮೊಬೈಲ್​ ಕದ್ದಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಬರೀ ಎರಡು ಬಾರಿ ಮಾತ್ರ ಕದ್ದಿದ್ದೀನಿ ಅಂತಾ ತಪ್ಪೊಪ್ಪಿಕೊಂಡಿದ್ದಾನೆ . ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಲ್ಲಿನ ಮಾನವ ಹಕ್ಕುಗಳ ಆಯೋಗ  ಪೊಲೀಸರ ಈ ರೀತಿಯ ಟಾರ್ಚರ್​ ಅನ್ನ ಖಂಡಿಸಿದೆ. ಪ್ರಕರಣ ಗಂಭೀರ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ಷಮೆ ಕೇಳಿದ್ದಾರೆ.