‘ಇಂದಿರಾ ಹೆಸರು ಎತ್ತಿದಾಕ್ಷಣ ಕಾಂಗ್ರೆಸ್ಸಿಗರಿಗೆ ಏಕೆ ನಡುಕ ಹುಟ್ಟುತ್ತೆ..?’

ಬೆಂಗಳೂರು: ಇಂದಿರಾ ಹೆಸರು ಎತ್ತಿದಾಕ್ಷಣ ಕಾಂಗ್ರೆಸ್ಸಿಗರಿಗೆ ಏಕೆ ನಡುಕ ಹುಟ್ಟುತ್ತೆ? ಯಾಕಂದ್ರೆ ಅವ್ಯವಹಾರ ಬೆಳಕಿಗೆ ಬರುತ್ತೆ ಅನ್ನೋ ಭಯದಲ್ಲಿ ಕಾಂಗ್ರೆಸ್ ಇದೆ ಅಂತಾ ಶಾಸಕ ಸಿ.ಟಿ.ರವಿ ಸದನದಲ್ಲಿ ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ವ್ಯವಹಾರದಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಇಂದು ಸಹ ಇಂದಿರಾ ಕ್ಯಾಂಟೀನ್ ಅವ್ಯವಹಾರ ಚರ್ಚೆ ಮಾಡಲಾಗುತ್ತದೆ. ಇಂದಿರಾ ಬಡವರಿಗಾಗಾ? ಇಲ್ಲವೇ ಕಾಂಗ್ರೆಸ್ ಉಳಿವಿಗಾಗಾ ಅಂತಾ ಗೊತ್ತಾಗಬೇಕಿದೆ ಎಂದು ಅವರು ಹೇಳಿದರು. ಅಲ್ಲದೇ, ಮೈತ್ರಿ ಸರ್ಕಾರದ ಬಜೆಟ್ ಕುರಿತ ಸಮಗ್ರ ಚರ್ಚೆಗೆ ಕಾಲಾವಕಾಶ ಬೇಕು. ಅಧಿವೇಶನ ಮತ್ತೂ ಒಂದು ವಾರ ವಿಸ್ತರಣೆ ಆಗಬೇಕು ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv