ಏಷ್ಯನ್​ ಗೇಮ್ಸ್​, ಭಾರತಕ್ಕೆ ಚೊಚ್ಚಲ ಚಿನ್ನ..!

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್​​ ಗೇಮ್ಸ್​​ನಲ್ಲಿ ಭಾರತದ ಕುಸ್ತಿ ಪಟು ಭಜರಂಗ್​​​ ಪೊನಿಯಾ ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ. 65 ಕೆ.ಜಿ.ಪುರುಷ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ​ ಪೂನಿಯಾ, ಫೈನಲ್​​​ನಲ್ಲಿ ಜಪಾನ್​ನ ಟಕೆನಾನಿ ಡೈಚಿ ವಿರುದ್ಧ 11-8 ಅಂಕಗಳಿಂದ ಗೆದ್ದು, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಭಜರಂಗ್​ ಪೂನಿಯಾಗೆ ಕ್ರಿಕೆಟಿಗ ಸೆಹ್ವಾಗ್​ ಸೇರಿದಂತೆ ಹಲವು ಗಣ್ಯರು​ ಶುಭ ಕೋರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv