ವಿಶ್ವಕಪ್​ ಟೂರ್ನಿಗೆ ನಾಳೆ ಟೀಂ ಇಂಡಿಯಾ ಪ್ರಕಟ..!

ವಿಶ್ವಕಪ್​ ಟೂರ್ನಿಗಾಗಿ ಬಿಸಿಸಿಐ ನಾಳೆ ಟೀಂ ಇಂಡಿಯಾವನ್ನ ಪ್ರಕಟಿಸಲಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟೀಂ ಇಂಡಿಯ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಭಾಗವಹಿಸಲಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಕೊಹ್ಲಿ, ವಿಶ್ವಕಪ್​ಗೆ ನಮ್ಮ ತಂಡ ಸಂಪೂರ್ಣ ಸಿದ್ಧವಾಗಿದೆ.ತಂಡದಲ್ಲಿ ಒಂದೆರಡು ಬದಲಾವಣೆ ಮಾತ್ರ ಆಗಲಿದೆ ಎಂದು ಸುಳಿವು ನೀಡಿದ್ರು. ಹೀಗಾಗಿ ಯಾಱರಿಗೆ ಇಂಗ್ಲೆಂಡ್​ ಫ್ಲೈಟ್ ಹತ್ತುವ ಚಾನ್ಸ್ ಸಿಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ನಾಲ್ಕನೇ ಕ್ರಮಾಂಕ ದೊಡ್ಡ ತಲೆನೋವಾಗಿದೆ.ಈ ಕ್ರಮಾಂಕದಲ್ಲಿ ಆಡಿಸಲು ಯಾವ ಬ್ಯಾಟ್ಸ್​ಮನ್​ ಆಯ್ಕೆ ಮಾಡಬೇಕು ಎಂದು ಆಯ್ಕೆದಾರರು ಸಿಕ್ಕಾಪಟ್ಟೆ ತಲೆಕೆಡಸಿಕೊಂಡಿದ್ದಾರೆ.ಈ ಸ್ಥಾನಕ್ಕಾಗಿ ಅಂಬಟಿ ರಾಯುಡು, ರಿಷಬ್ ಪಂತ್​ ಸೇರಿದಂತೆ ಹಲವು ಆಟಗಾರರ ನಡುವೆ ಪೈಪೋಟಿ ಇದೆ. ಕ್ರಿಕೆಟ್​ ಜನಕರ ನಾಡು ಇಂಗ್ಲೆಂಡ್​ನಲ್ಲಿ ಮೇ 30 ರಿಂದ ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ. ಟೀಂ ಇಂಡಿಯಾ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ.