ಭಾರತೀಯರಿಗೆ ವರವಾಗಲಿರುವ ‘ಟ್ರಂಪ್‘ ಹೊಸ ನೀತಿ..!?

ವಾಷಿಂಗ್ಟನ್‌: ಅಮೆರಿಕದಲ್ಲಿ ವಿದೇಶಿಯರು ನೆಲೆಸಲು ‘ಬಿಲ್ಡ್ ಅಮೆರಿಕ’ ಎಂಬ ಹೊಸ ವೀಸಾ ಯೋಜನೆ ಆರಂಭಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇಷ್ಟು ದಿನ ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಎಂಬ ಪದ್ದತಿ  ಜಾರಿಯಲ್ಲಿತ್ತು. ಕುಟುಂಬ ಆಧಾರಿತ ವಲಸೆ ನೀತಿಯ ಬದಲಿಗೆ, ಉದ್ಯೋಗಿಯ ಪ್ರತಿಭೆ, ವೃತ್ತಿ ಕೌಶಲ್ಯವನ್ನು ಆಧರಿಸಿ ಟ್ರಂಪ್ ಆಡಳಿತ ಈ ನೀತಿ ರೂಪಿಸಲಿದೆ ಎನ್ನಲಾಗಿದೆ.

‘ಬಿಲ್ಡ್ ಅಮೆರಿಕ’ ವೀಸಾ ಪದ್ದತಿ ಭಾರತೀಯರಿಗೆ ಅನುಕೂಲಕರ. ಹೊಸ ಪದ್ಧತಿಯಲ್ಲಿ ಕೌಶಲ್ಯ ಹೊಂದಿರುವವರು, ವಲಸಿಗ ಉದ್ಯೋಗಿಗಳ ಸಂಗಾತಿ ಮತ್ತು ಮಕ್ಕಳು, ಇಂಗ್ಲಿಷ್‌ ಭಾಷಾ ಪ್ರಾವಿಣ್ಯತೆ ಹೊಂದಿರುವವರು, ಸೋದರರಿಗೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಯುಎಸ್​ಎಗೆ ಹೋಗುವವರಿಗೆ ಆದ್ಯತೆ ನೀಡಲಾಗುತ್ತೆ ಅಂತಾ ಈಗಾಗಲೇ ಟ್ರಂಪ್ ಹೇಳಿರುವುದರಿಂದ ಇದು ಭಾರತೀಯರಿಗೆ ಅನುಕೂಲವಾಗಲಿದೆ. ಈ ಹೊಸ ಪ್ರಸ್ತಾಪದಿಂದ ಅಮೆರಿಕದ ವೀಸಾ ಕೋಟಾವನ್ನು ಶೇಕಡಾ 12ರಿಂದ ಶೇಕಡಾ 57ಕ್ಕೆ ಏರಿಸಲಾಗಿದೆ. ಇದರಿಂದಾಗಿ ಸಾವಿರಾರು ಭಾರತೀಯ ವೃತ್ತಿಪರರಿಗೆ ಗ್ರೀನ್‌ಕಾರ್ಡ್‌ ಸಲುವಾಗಿ ಸುದೀರ್ಘ ಸಮಯದ ತನಲ ಕಾಯುವ ಸಮಸ್ಯೆ ತಪ್ಪುತ್ತದೆ.

ಇನ್ನು ಈ ಹೊಸ ನೀತಿಯಲ್ಲಿ ವೈಟ್​ಹೌಸ್​ ಅಧಿಕಾರಿಗಳ ಪ್ರಕಾರ ಹೊಸ ವಲಸೆ ನೀತಿಗೆ 6 ಪ್ರಮುಖ ಗುರಿಗಳಿವೆ. ಗಡಿ ಭದ್ರಪಡಿಸುವುದು, ಮಾನವೀಯ ಮೌಲ್ಯಗಳ ರಕ್ಷಣೆ, ಕುಟುಂಬಗಳ ಏಕೀಕರಣ, ಅಮೆರಿಕದ ಉದ್ಯೋಗಿಗಳ ವೇತನದ ರಕ್ಷಣೆ, ಕೌಶಲ್ಯವಿರೋ ವೃತ್ತಿಪರ ವಲಸಿಗರನ್ನು ಆಕರ್ಷಿಸುವುದು, ನಿರ್ಣಾಯಕ ಉದ್ದಿಮೆಗಳಿಗೆ ಉದ್ಯೋಗಿಗಳ ಪೂರೈಕೆಯಂತಹ ಗುರಿಗಳನ್ನು ಹೊಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv