ಚೀನಾಗಿಂತ ದುಪಟ್ಟು ವೇಗದಲ್ಲಿ ಭಾರತದ ಜನಸಂಖ್ಯೆ ಹೆಚ್ಚಳ..!

ನವದಹೆಲಿ: ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರೋದು ನೆರೆಯ ಚೀನಾ. ಆದ್ರೆ, ಇತ್ತೀಚಿಗೆ ಭಾರತದಲ್ಲಿ ಜನ ಸಂಖ್ಯೆ ಹೆಚ್ಚುತ್ತಿರುವ ವೇಗವನ್ನ ನೋಡಿದ್ರೆ, ಆದಷ್ಟು ಬೇಗ ಚೀನಾವನ್ನೂ ಹಿಂದಿಕ್ಕುವ ಸಾಧ್ಯತೆ ಇದೆ. ಸದ್ಯ ಕಳೆದ 9 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಚೀನಾಕ್ಕಿಂತಲೂ ವೇಗವಾಗಿ ಜನ ಸಂಖ್ಯೆ ಬೆಳೆಯುತ್ತಿದೆಯಂತೆ.

2010 ರಿಂದ 2019ರ ಅವಧಿಯಲ್ಲಿ ವಾರ್ಷಿಕ ಶೇಕಡ 1.2ರಷ್ಟು ಭಾರತದ ಜನ ಸಂಖ್ಯೆ ಹೆಚ್ಚಾಗಿದೆ. ಇದು ಚೀನಾಗಿಂತಲೂ ದುಪ್ಪಟ್ಟು ಅಂತ ಯುನೈಟೆಡ್ ನೇಷನ್ಸ್​ನ ಪಾಪುಲೇಷನ್ ಫಂಡ್ ವರದಿ ನೀಡಿದೆ. ಚೀನಾದಲ್ಲಿ ವಾರ್ಷಿಕ ಜನಸಂಖ್ಯೆ ಹೆಚ್ಚಳ ಶೇಕಡ 0.5ರಷ್ಟಿದೆ. ಆದ್ರೆ ಭಾರತದಲ್ಲಿ ಇದು ಶೇಕಡ 1.2ರಷ್ಟಿದೆ. 2019ರಲ್ಲಿ ಭಾರತದ ಜನ ಸಂಖ್ಯೆ 136 ಕೋಟಿ ಇದ್ರೆ, ಚೀನಾದ ಜನ ಸಂಖ್ಯೆ 142 ಕೋಟಿ ಇದೆ. ಇನ್ನು, 2019ರಲ್ಲಿ ಚೀನಾದಲ್ಲಿ ವಾಸಿಸುವವರ ಗರಿಷ್ಠ ಜೀವಿಸುವ ಅವಧಿಯ 77 ವರ್ಷಗಳಾದ್ರೆ ಭಾರತದಲ್ಲಿ ಇದು ಕೇವಲ 69 ವರ್ಷ ಅಂತ ವರದಿ ನೀಡಿದೆ.