ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿ ಮೈಲಿಗಲ್ಲು ಸೃಷ್ಟಿಸಿದ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆ ಮಧ್ಯಮ ದೂರದ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಮೂಲಕ ಭಾರತೀಯ ನೌಕಾಪಡೆ ತನ್ನ ವಾಯು ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಂಡಿದೆ. ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿರುವ ನೌಕಾಪಡೆ ವಿಭಾಗಗಳು ಪಶ್ಚಿಮ ಕಡಲ ತೀರದಲ್ಲಿ ಎಂಆರ್​ಎಸ್​ಎಎಂ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ. ಈ ಮಹತ್ತರ ಮೈಲಿಗಲ್ಲಿಗೆ ರಕ್ಷಣಾ ಸಚಿವಾಲಯ ಶ್ಲಾಘನೆ ವ್ಯಕ್ತಪಡಿಸಿದೆ. ಭಾರತೀಯ ನೌಕಾಪಡೆ, ಇಸ್ರೇಲ್‌ ಏರೋಸ್ಪೇಸ್‌ ಮತ್ತು ಡಿಆರ್‌ಡಿಒ ಸಹಭಾಗಿತ್ವದಲ್ಲಿ ಈ ಪರೀಕ್ಷೆ ನಡೆದಿತ್ತು. ಇನ್ನು ಈ ಕ್ಷಿಪಣಿಯನ್ನು ಡಿಆರ್‌ಡಿಎಲ್‌ ಲ್ಯಾಬ್‌ ಹಾಗೂ ಇಸ್ರೇಲ್‌ ಏರೋಸ್ಪೇಸ್‌ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv