ಕಾರವಾರ: 25 ಮಂದಿಯಿದ್ದ ಬೋಟ್ ರಕ್ಷಣೆ

 ಕಾರವಾರ: ಭಾರತೀಯ ಕೋಸ್ಟ್​ ಗಾರ್ಡ್​​ ರಕ್ಷಣಾ ತಂಡವು 25 ಮಂದಿಯಿದ್ದ ಬೋಟ್​ ಒಂದನ್ನು ರಕ್ಷಿಸಿದ್ದಾರೆ. ಕರ್ನಾಟಕ-ಗೋವಾ ಗಡಿ ಭಾಗದಲ್ಲಿ, ಕಾರವಾದಿಂದ 10 ನಾಟಿಕಲ್​ ಮೈಲ್​ ದೂರದಲ್ಲಿ ಈ ಬೋಟ್​ ಆಪತ್ತಿಗೆ ಈಡಾಗಿತ್ತು.

ಸಮುದ್ರದಲ್ಲಿ ತಾಂತ್ರಿಕ ತೊಂದರೆ ಎದುರಿಸಿದ ಬೋಟ್​, ಮುಂದೆ ಸಾಗಲು ಹೆಣಗಾಡುತ್ತಿತ್ತು. ಆ ವೇಳೆ ಬೋಟ್ ಸಿಬ್ಬಂದಿ ಕೋಸ್ಟ್​ ಗಾರ್ಡ್​ಗೆ ರಕ್ಷಣೆಗೆ ಮೊರೆಯಿಟ್ಟಿದೆ. SoS ಕರೆ ಬರುತ್ತಿದ್ದಂತೆ ರಕ್ಷಣೆಗೆ ಇಳಿದ ಕೋಸ್ಟ್​ ಗಾರ್ಡ್ ಸಿಬ್ಬಂದಿ, ಬೋಟ್​ ಸಮೇತ 25 ಮಂದಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv