ಲಂಕಾದಿಂದ ದಾಳಿಕೋರರು ತಪ್ಪಿಸಿಕೊಳ್ಳದಂತೆ ಭಾರತದ ಕೋಸ್ಟ್​​ನಲ್ಲಿ ಹೈ-ಅಲರ್ಟ್​

ನವದೆಹಲಿ: ಶ್ರೀಲಂಕಾದಲ್ಲಿ ನಿನ್ನೆ 300ಕ್ಕೂ ಹೆಚ್ಚು ಮುಗ್ಧ ಜನರ ಸಾವಿಗೆ ಕಾರಣರಾದ ಪಾಪಿ ಉಗ್ರರು ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಎಂಟ್ರಿ ಕೊಡದಂತೆ ತಡೆಯೋಕೆ ಭಾರತದ ಕರವಾಳಿ ಭದ್ರತಾ ಪಡೆ ಹೈಅಲರ್ಟ್​​ನಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.  ಈಸ್ಟರ್​ ಭಾನುವಾರವನ್ನು ಕರಾಳ ಭಾನುವಾರವನ್ನಾಗಿಸಿದ ಸರಣಿ ಸ್ಫೋಟದ ಹಿಂದೆ ನ್ಯಾಷನಲ್ ಥೋವೀತ್​ ಜಮಾತ್​​ ಎಂಬ ಸ್ಥಳೀಯ ಇಸ್ಲಾಂ ಸಂಘಟನೆಯ ಕೈವಾಡವಿರಬಹುದು ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ದಾಳಿಕೋರರು ಸಮುದ್ರ ಮಾರ್ಗದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಬಹುದು ಎಂಬ ಆತಂಕವಿದೆ. ಹೀಗಾಗಿ ಭಾರತದ ಕರಾವಳಿ ತೀರದಲ್ಲಿ ಹದ್ದಿನ ಕಣ್ಣಿಡಲು ಬಳಸಲಾಗುವ ವಿಮಾನಗಳು ಹಾಗೂ ಹಡಗುಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv