ಉಗ್ರರ ಗುಂಡಿನ ದಾಳಿಗೆ ಸೇನಾ ಕಮಾಂಡರ್ ಹುತಾತ್ಮ

ಜಮ್ಮು-ಕಾಶ್ಮೀರ: ಗಡಿಯಲ್ಲಿ ಉಗ್ರರ ಪುಂಡಾಟ ಮುಂದುವರಿದಿದ್ದು, ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಕಮಾಂಡರ್‌ ಹುತಾತ್ಮರಾಗಿದ್ದಾರೆ. ಕುಪ್ವಾರದ ಸಾದು ಗಂಗಾ ಅರಣ್ಯ ಪ್ರದೇಶದ ಬಳಿ ಉಗ್ರರ ಗುಂಪೊಂದು ಅಡಗಿ ಕುಳಿತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಉಗ್ರರು ಮತ್ತು ಸೇನೆಯ ನಡುವಿನ ಗುಂಡಿನ ದಾಳಿಯಲ್ಲಿ ಸೇನಾ ಕಮಾಂಡರ್ ಸಿಪಾಯಿ ಮುಕುಲ್ ಮೀನಾ ಹುತಾತ್ಮರಾಗಿದ್ದಾರೆ. ಇನ್ನೋರ್ವ ಯೋಧ ಗಾಯಗೊಂಡಿದ್ದು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಕಾಶ್ಮೀರದ ಸೋಪಿಯನ್ ಜಿಲ್ಲೆ ಬಳಿ ಸಂಭವಿಸಿರುವ ಆಕಸ್ಮಿಕ ಸ್ಫೋಟದಲ್ಲಿ 6 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.