ಹಗುರ ವಿಮಾನದಲ್ಲಿ ಮಹಾಸಾಗರ ದಾಟಿದ ವಿಶ್ವದ ಮೊದಲ ಮಹಿಳಾ ಪೈಲಟ್!

ಮುಂಬೈ ಮೂಲದ 23ವರ್ಷದ ಆರೋಹಿ ಪಂಡಿತ್ ಲಘು ಕ್ರೀಡಾ ವಿಮಾನದ ಮೂಲಕ ಅಟ್ಲಾಂಟಿಕ್‌ ಮಹಾಸಾಗರ ದಾಟಿದ ವಿಶ್ವದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಸ್ಕಾಟ್ಲ್ಯಾಂಡ್​​ನ ವಿಕ್‌ನಿಂದ ಕೆನಡಾದ ಇಕಾಲಿಟ್‌ವರೆಗೆ ಹಾರಾಟ ನಡೆಸಿದ ಆರೋಹಿ, ಕೇವಲ 10 ದಿನಗಳಲ್ಲಿ 18 ರಾಷ್ಟ್ರಗಳ ಮೂಲಕ  37,000 ಕಿ.ಮೀ. ಅಂತರವನ್ನು ಕ್ರಮಿಸಿದ್ದಾರೆ. ಈ ಗುರಿ ತಲುಪಲು ಕೇವಲ 120 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಕೆನಡಾದ ನುನಾವುಡ್‌ನಲ್ಲಿರುವ ಇಕಾಲಿಟ್ ವಿಮಾನ ನಿಲ್ದಾಣದಲ್ಲಿ ಸಂಜೆ 6.29ಕ್ಕೆ ವಿಮಾನವನ್ನಿಳಿಸಿದ ಆರೋಹಿ ಎಲ್ಲಕ್ಕಿಂತ ಮೊದಲು ಭಾರತದ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

ಭಾರತದ ಬರೋಡಾದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದ ಆರೋಹಿ ಬೊರಿವಿಲಿ ನಿವಾಸಿ. ಮುಂಬೈ ಫ್ಲೈಯಿಂಗ್ ಕ್ಲಬ್‍ನಲ್ಲಿ ವಿಮಾನ ಚಾಲನೆ ತರಬೇತಿ ಪಡೆದ 7 ತಿಂಗಳ ಕಠಿಣ ತರಬೇತಿ ಪಡೆದಿದ್ದ ಆರೋಹಿ ಮಹಿಳಾ ಸಬಲೀಕರಣದ ಉದ್ದೇಶದಿಂದ 2018 ಜುಲೈನಲ್ಲಿ ಈ ಯಾತ್ರೆ ಕೈಗೊಂಡಿದ್ರು.

ಆರೋಹಿಗೆ ಗ್ರೀನ್‌ಲ್ಯಾಂಡ್‌ವರೆಗೂ ಆಪ್ತ ಗೆಳತಿ ಮತ್ತು ಪೈಲೆಟ್ ಕೀಥ್‍ಹೇರ್ ಮಿಸ್‍ಕ್ವಿಟಾ ಈ ಸಾಹಸಯಾನದಲ್ಲಿ ಸಾಥ್ ನೀಡಿದ್ರು. ಪರಿಸರ ಸ್ನೇಹಿ ಆಲ್ಟ್ರಾಲೈಟ್ ಸೈನಸ್-912 ಹಗುರ ವಿಮಾನ (ಸುಮಾರು 300 ಕಿಲೋ) ಏಕಯಂತ್ರ ಮತ್ತು ಎರಡು ಆಸನಗಳನ್ನು ಹೊಂದಿದೆ. ಇದು ಕೇವಲ ಒಂದು ಬುಲೆಟ್ ಬೈಕ್ ನಷ್ಟು ತೂಕ ಹೊಂದಿರುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv