ಏಪ್ರಿಲ್​ 15 ರಂದು ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ..!

ಇದೇ ತಿಂಗಳ 15ರಂದು ವಿಶ್ವಕಪ್​ ಟೂರ್ನಿಗಾಗಿ ಟೀಂ ಇಂಡಿಯಾವನ್ನ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಇಂದು ನಡೆದ ಬಿಸಿಸಿಐನ ಸುಪ್ರೀಂಕೋರ್ಟ್​ ನೇಮಿತ ಆಡಳಿತಾತ್ಮಕ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.ಮುಂಬೈಯಲ್ಲಿ ಮುಂದಿನ ಸೋಮವಾರ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಈ ಸಭೆಯಲ್ಲಿ ಕ್ಯಾಪ್ಟನ್​ ಕೊಹ್ಲಿ ಭಾಗವಹಿಸಲಿದ್ದಾರೆ ಎಂದು ಆಯ್ಕೆಯ ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಕೊಹ್ಲಿ, ವಿಶ್ವಕಪ್​ಗೆ ನಮ್ಮ ತಂಡ ಸಂಪೂರ್ಣ ಸಿದ್ಧವಾಗಿದೆ.ತಂಡದಲ್ಲಿ ಒಂದೆರಡು ಬದಲಾವಣೆ ಮಾತ್ರ ಆಗಲಿದೆ ಎಂದು ಸುಳಿವು ನೀಡಿದ್ರು. ಹೀಗಾಗಿ ಯಾಱರಿಗೆ ಇಂಗ್ಲೆಂಡ್​ ಫ್ಲೈಟ್ ಹತ್ತುವ ಚಾನ್ಸ್ ಸಿಗಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ನಾಲ್ಕನೇ ಕ್ರಮಾಂಕ ದೊಡ್ಡ ತಲೆನೋವಾಗಿದೆ. ಈ ಕ್ರಮಾಂಕದಲ್ಲಿ ಆಡಿಸಲು ಯಾವ ಬ್ಯಾಟ್ಸ್​ಮನ್​ ಆಯ್ಕೆ ಮಾಡಬೇಕು ಎಂದು ಆಯ್ಕೆದಾರರು ಸಿಕ್ಕಾಪಟ್ಟೆ ತಲೆಕೆಡಸಿಕೊಂಡಿದ್ದಾರೆ.ಈ ಸ್ಥಾನಕ್ಕಾಗಿ ಅಂಬಟಿ ರಾಯುಡು, ರಿಷಬ್ ಪಂತ್​ ಸೇರಿದಂತೆ ಹಲವು ಆಟಗಾರರ ನಡುವೆ ಪೈಪೋಟಿ ಇದೆ. ಕಳೆದ ವಾರ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ಏಪ್ರಿಲ್​ 20ರೊಳಗೆ ವಿಶ್ವಕಪ್​ಗಾಗಿ ಟೀಂ ಇಂಡಿಯಾ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದರು. ಒಂದೂವರೆ ವರ್ಷದಿಂದ ಆಯ್ಕೆ ಸಮಿತಿ, ವಿಶ್ವಕಪ್​ಗೆ ತಂಡ ಹೇಗಿರಬೇಕು.ಯಾರೆಲ್ಲಾ ಆಟಗಾರರಿಗೆ ಚಾನ್ಸ್ ನೀಡಬೇಕು ಅನ್ನೋದರ ಬಗ್ಗೆ ಸಾಕಷ್ಟು ಸಿದ್ಧತೆ ನಡೆಸುತ್ತಿದೆ.ಆಯ್ಕೆದಾರರು ಎಲ್ಲಾ ಆಟಗಾರರ ಪ್ರದರ್ಶನವನ್ನ ಗಮನಿಸಿದ್ದಾರೆ.ಹೀಗಾಗಿ ಶ್ರೇಷ್ಠ ತಂಡವನ್ನ ಆಯ್ಕೆ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದು ಪ್ರಸಾದ್​ ವಿಶ್ವಾಸ ವ್ಯಕ್ತಪಡಿಸಿದ್ರು.ಮೇ 30 ರಿಂದ ಆಂಗ್ಲರ ನಾಡು ಇಂಗ್ಲೆಂಡ್​ನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರು ಸದ್ಯ ಐಪಿಎಲ್ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.