ದಿನೇಶ್​ ಕಾರ್ತಿಕ್ ಅನುಭವಕ್ಕೆ ಪಂತ್​ ‘ಸ್ಟಂಪ್​ಔಟ್’..!

ಆಂಗ್ಲರ ನಾಡಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಜನರ ಟೀಂ ಇಂಡಿಯಾವನ್ನ ಪ್ರಕಟ ಮಾಡಿದೆ. ಈ ತಂಡದಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್​ಗೆ, ಸ್ಥಾನ ಕಲ್ಪಿಸಲಾಗಿದೆ. ವಿಶ್ವಕಪ್ ತಂಡದಲ್ಲಿ ಬ್ಯಾಕ್​ಅಪ್ ವಿಕೆಟ್​ ಕೀಪರ್ ಬ್ಯಾಟ್ಸ್​​ಮನ್​ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದು, ಆಯ್ಕೆ ಸಮಿತಿಗೆ ತಲೆ ನೋವಾಗಿತ್ತು. ಈ ಸ್ಥಾನಕ್ಕಾಗಿ ಯುವ ಆಟಗಾರ ರಿಷಭ್​ ಪಂತ್ ಹಾಗು ಅನುಭವಿ ದಿನೇಶ್​ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಆದ್ರೆ ಆಯ್ಕೆ ಸಮಿತಿ ಅನುಭವಕ್ಕೆ ಮಣೆ ಹಾಕಿ, ಕಾರ್ತಿಕ್​ಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಪಂತ್​ಗೆ ಹೋಲಿಸಿದ್ರೆ, ದಿನೇಶ್ ಕಾರ್ತಿಕ್​ಗೆ  ಇಂಗ್ಲೆಂಡ್​ನ ಫಾಸ್ಟ್​ ಆ್ಯಂಡ್​ ಸ್ವಿಂಗಿಂಗ್ ಕಂಡೀಷನ್​ನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಜೊತೆಗೆ ಕಾರ್ತಿಕ್ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸುವ ಸಾಮರ್ಥ್ಯವನ್ನ ಹೊಂದಿದ್ದಾರೆ. ಇದೇ ದಿನೇಶ್​ ಕಾರ್ತಿಕ್​ಗೆ ಬಿಗ್ ಪ್ಲಸ್ ಪಾಯಿಂಟ್ ಆಗಿರೋದು. ಇನ್ನು ರಿಷಭ್​ ಪಂತ್, ಕಳೆದ​ ಇಂಗ್ಲೆಂಡ್​ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ ಸ್ವಿಂಗಿಂಗ್ ಕಂಡೀಷನ್​ಲ್ಲಿ ಪಂತ್, ವಿಕೆಟ್ ಹಿಂದೆ ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಪಂತ್, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.