ಐಪೋನ್‌ 6ಎಸ್‌ ಭಾರತದಲ್ಲಿ ತಯಾರಾಗುತ್ತೆ, ಎಲ್ಲಿ ಗೊತ್ತಾ…?

ಐಫೋನ್‌… ಮೋಸ್ಟ್ ಅಟ್ರ್ಯಾಕ್ಟಿವ್‌ ಹಾಗೂ ವಿಶ್ವದ ನಂಬರ್‌ ಒನ್‌ ಮೊಬೈಲ್‌. ಇಂತಹ ಮೊಬೈಲ್‌ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದ್ರೆ ಐಫೋನ್‌ನ ಬೆಲೆ ಕೇಳಿದ್ರೆ ಶಾಕ್‌ ಆಗೋ ತನ್ನ ಭಾರತೀಯ ಗ್ರಾಹಕರಿಗೆ ಆಪಲ್‌ ಕಂಪನಿ ಗುಡ್‌ ನ್ಯೂಸ್‌ ನೀಡಿದೆ. ಆ್ಯಪಲ್‌ ಮೇಲಿನ ಕಸ್ಟಂ ಚಾರ್ಜ್‌ಅನ್ನು ತಪ್ಪಿಸುವ ಸಲುವಾಗಿ ಇದೇ ಮೊದಲ ಭಾರಿಗೆ ಆ್ಯಪಲ್‌ ಕಂಪನಿ 6ಎಸ್‌ಅನ್ನು ತಯಾರಿಸಲು ನಿರ್ಧರಿಸಿದೆ. ಅದು ಕೂಡ ಬೆಂಗಳೂರಿನಲ್ಲಿ. ಈ ಮೂಲಕ ಇದೇ ಮೊದಲ ಬಾರಿಗೆ ಐಫೋನ್‌ ಮೇಲೆ ಮೇಡ್ ಇನ್ ಇಂಡಿಯಾ ಎಂಬ ಅಕ್ಷರಗಳನ್ನು ಕಾಣಬಹುದಾಗಿದೆ. ಕಳೆದ ವರ್ಷವಷ್ಟೇ ಭಾರತದಲ್ಲಿ ಐಫೋನ್‌ನ ಸಿಝಡ್‌ ಫೋನ್‌ ತಯಾರಿಕೆಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿತ್ತು. ಆದ್ರೆ ಇದೀಗ 6ಎಸ್‌ ಆವೃತ್ತಿಯು ಫೋನ್‌ಗಳನ್ನು ಬೆಂಗಳೂರಿನಲ್ಲಿ ವೆಸ್ಟ್ರನ್‌ ಅನ್ನೋ ಖ್ಯಾತ ಕಂಪನಿಯೊಂದು ತಯಾರು ಮಾಡಲಿದೆ. ಹೀಗಾಗಿ ಐಫೋನಿನ ಬೆಲೆ ಇನ್ನಷ್ಟು ಕಡಿಮೆ ಆಗೋ ಸಾಧ್ಯತೆ ಇದೆ.