ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ಕಾರ್ಡಿಫ್: ಬಹುನಿರೀಕ್ಷಿತ ಐಸಿಸಿ 2019 ಏಕದಿನ ವಿಶ್ವಕಪ್‌ಗೂ ಮುನ್ನ ನಡೆದ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 95 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ವಿಶ್ವಕಪ್​​ ಗೆಲ್ಲುವ ಫೇವರಿಟ್​ ತಂಡ ಅಂತಾ ಮತ್ತೊಮ್ಮೆ ಸಂದೇಶ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ವಿಜಯ್ ಶಂಕರ್​ ಬಹುಬೇಗ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರುವ ಮೂಲಕ ನಿರಾಸೆ ಮೂಡಿಸಿದ್ರು. ಆದ್ರೆ, ನಾಯಕ ವಿರಾಟ್ ಕೊಹ್ಲಿ 47ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ರು. ಕೊಹ್ಲಿ ಮತ್ತು ಎಂ.ಎಸ್. ಧೋನಿ ಜೊತೆ ಉತ್ತಮ ಜೊತೆಯಾಟವಾಡಿದ ಕೆ.ಎಲ್.​ ರಾಹುಲ್​ 108 ರನ್​ಗಳ ಭರ್ಜರಿ ಶತಕ ಬಾರಿಸಿದ್ರು. ಎಂ.ಎಸ್. ​ಧೋನಿ ಕೂಡ ಅಬ್ಬರದ ಬ್ಯಾಟಿಂಗ್​ ನಡೆಸಿ ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದ್ರು. 8 ಬೌಂಡರಿ ಹಾಗೂ 6 ಸಿಕ್ಸರ್​ ಬಾರಿಸಿದ ದೋನಿ ಒಟ್ಟು 113 ರನ್​ ಗಳಿಸಿ ತಂಡದ ಮೋತ್ತ 350ರ ಗಡಿ ದಾಟಿಸುವಲ್ಲಿ ನೆರವಾದ್ರು. ಒಟ್ಟಾರೆ ಭಾರತ 50 ಓವರ್​ನಲ್ಲಿ 7 ಚಿಕೆಟ್​ ನಷ್ಟಕ್ಕೆ 359 ರನ್​​ ಗಳಿಸಿತ್ತು. ಇನ್ನು ಈ ಬೃಹತ್​​ ಮೊತ್ತ ಬೆನ್ನಟ್ಟಿದ ಬಾಂಗ್ಲಾಕ್ಕೆ ಬೂಮ್ರಾ ಮೊದಲಿಗೆ 2 ವಿಕೆಟ್ ಪಡೆದು ಶಾಕ್ ಕೊಟ್ರು. ಇದರಿಂದ ಚೇತರಿಸಿಕೊಳ್ಳುವ ಮೊದಲೇ ಚಾಹಲ್​ ಹಾಗೂ ಕುಲ್​ದೀಪ್​​ ಯಾದವ್​​ ತಲಾ 3 ವಿಕೆಟ್​​ ಪಡೆದು ಶಾಕ್​ ನೀಡಿದ್ರು. ಅಂತಿಮವಾಗಿ ಬಾಂಗ್ಲಾ 49ನೇ ಓವರ್​​ನಲ್ಲಿ 264 ರನ್​ಗಳಿಸಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಪರಾಭವಗೊಂಡಿತು.