ಇಂದು ಏಷ್ಯಾಕಪ್​ ಫೈನಲ್ಸ್​​ನಲ್ಲಿ ಭಾರತದ ಎದುರಾಳಿ ಬಾಂಗ್ಲಾ..!

ಮಹಿಳಾ ಟಿ-20 ಏಷ್ಯಾಕಪ್​ ಟೂರ್ನಿ ಫೈನಲ್​ ಪಂದ್ಯಕ್ಕಾಗಿ ಭಾರತ ಹಾಗೂ ಬಾಂಗ್ಲಾ ತಂಡಗಳು ಅಣಿಯಾಗಿವೆ. ಮಲೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಟೀಮ್ ಇಂಡಿಯಾ 7 ನೇ ಬಾರಿ ಕಪ್​ ಗೆಲ್ಲುವ ಕನಸಿನಲ್ಲಿದ್ರೆ, ಬಾಂಗ್ಲಾ ಚೊಚ್ಚಲ ಏಷ್ಯಾಕಪ್​​ ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಸೇಡು ತೀರಿಸಿಕೊಳ್ಳುವ ತವಕದಲ್ಲಿ ಕೌರ್​​ ಪಡೆ
ಕೌಲಾಲಂಪುರ್​​ದಲ್ಗ್ಲಿ ನಡೆದ ಬಾಂಗ್ಲಾ ವಿರುದ್ಧದ ಲೀಗ್​ ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದ್ದ ಭಾರತ ಮಹಿಳಾ ತಂಡ, ನಾಳೆ ನಡೆಯಲಿರುವ ಮಹತ್ವದ ಫೈನಲ್​ನಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ಟೀಮ್ ಇಂಡಿಯಾ ನೀಡಿದ್ದ 141 ರನ್​ ಟಾರ್ಗೆಟ್​ ಬೆನ್ನತ್ತಿದ್ದ ಬಾಂಗ್ಲಾ ವನಿತೆಯರು, 19.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದು ಕೊಂಡು 142 ರನ್ ಬಾರಿಸುವ ಮೂಲಕ 7 ವಿಕೆಟ್​ಗಳ ಐತಿಹಾಸಿಕ ಗೆಲುವು ದಾಖಲಿಸಿದ್ರು.

ಏಷ್ಯಾಕಪ್​ನಲ್ಲಿ ಮುಂದುವರೆಯುತ್ತಾ ಭಾರತದ ಗೆಲುವಿನ ಓಟ..?
ಮಹಿಳಾ ಟಿ-20 ಏಷ್ಯಾಕಪ್​ ಟೂರ್ನಿಯಲ್ಲಿ ಇದುವರೆಗೂ ಭಾರತ ತಂಡವೇ ಮೇಲುಗೈ ಸಾಧಿಸುತ್ತಾ ಬಂದಿದೆ. ಇದುವರೆಗೂ ನಡೆದಿರುವ 6 ಟೂರ್ನಿಗಳಲ್ಲೂ ಭಾರತವೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಈ ಬಾರಿ ಕೂಡ ಕಪ್​ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಭಾರತ ಬಲಿಷ್ಠ ಬ್ಯಾಟಿಂಗ್ ಪಡೆಯೊಂದಿಗೆ, ಶಕ್ತಿಯುತ ಬೌಲಿಂಗ್​ ಪಡೆಯನ್ನೂ ಸಹಿತ ಹೊಂದಿದ್ದು ಗೆಲ್ಲುವ ಫೇವರೆಟ್​ ತಂಡವಾಗಿದೆ. ಅಷ್ಟಕ್ಕೂ ಬಾಂಗ್ಲಾ ವನಿತೆಯರನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಭಾರತದ ಮಾಜಿ ವಿಕೆಟ್​ ಕೀಪರ್​​ ಅಂಜು ಜೈನ್​ ಗರಡಿಯಲ್ಲಿ ಪಳಗಿರುವ ಬಾಂಗ್ಲಾ, ಟೂರ್ನಿಯಲ್ಲಿ ಈಗಾಗಲೇ ಒಂದು ಬಾರಿ ಭಾರತವನ್ನು ಮಣಿಸಿದ್ದು ಮತ್ತೊಮ್ಮೆ ಅದೇ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಲ್ಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv