ಟೀಮ್ ಇಂಡಿಯಾ ಮಾನ ಉಳಿಸಿದ ಪೂಜಾರ ಭರ್ಜರಿ ಶತಕ

ಅಡಿಲೇಡ್ ಟೆಸ್ಟ್​ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾ ಬ್ಯಾಟ್ಸ್​​​ಮನ್ ಚೇತೇಶ್ವರ್ ಪೂಜಾರ ಭರ್ಜರಿ ಶತಕ ಸಿಡಿಸಿದ್ರು. ಪಂದ್ಯದ ಆರಂಭದಲ್ಲಿ ಆಸಿಸ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಕೆ.ಎಲ್ ರಾಹುಲ್, ಮುರಳಿ ವಿಜಯ್, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಏಕಾಂಗಿಯಾಗಿ ಹೋರಾಟ ನಡೆಸಿದ ಪೂಜಾರಾ ಕಾಂಗರೂ ಬೌಲರ್​ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿ, ಟೆಸ್ಟ್ ಕ್ರಿಕೆಟ್​ನ 16ನೇ ಶತಕ ಸಿಡಿಸಿದ್ರು. ಅಷ್ಟೇ ಅಲ್ಲ.. ಟೆಸ್ಟ್ ಕ್ರಿಕೆಟ್​ನಲ್ಲಿ 5 ಸಾವಿರ ರನ್​ ಸಹ ಪೂರೈಸಿದ್ರು.