ಭಾರತದ ಕಿರೀಟಕ್ಕೆ ಮತ್ತೊಂದು ಗರಿ: ನಿರ್ಭಯ್​​​ ಕ್ಷಿಪಣಿ ಪರೀಕ್ಷೆ ಸಕ್ಸಸ್​

ನವದೆಹಲಿ: ಭಾರತ ಇಂದು ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಒಡಿಶಾ ತೀರದಿಂದ ನಿರ್ಭಯ್​​ ಹೆಸರಿನ ಸಬ್​​ ಸೋನಿಕ್​ ಕ್ರೂಸ್​​ ಮಿಸೈಲ್​​​​​ ಪರೀಕ್ಷೆ ನಡೆಸಿ ಭಾರತ ಯಶಸ್ವಿಯಾಗಿದೆ. ನಿರ್ಭಯ್,​​ ದೇಶದ ಮೊಟ್ಟಮೊದಲ ದೇಸಿ ನಿರ್ಮಿತ ದೂರವ್ಯಾಪಿ ಕ್ರೂಸ್​​ ಮಿಸೈಲ್​​. ಇದು 1000 ಕಿ.ಮೀ ಸ್ಟ್ರೈಕ್​​ ರೇಂಜ್​ ಹೊಂದಿದೆ. ಡಿಆರ್​ಡಿಓ ಅಡಿಯಲ್ಲಿ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್​ಮೆಂಟ್​​ ಎಸ್ಟಾಬ್ಲಿಷ್​​ಮೆಂಟ್​​​ ಲ್ಯಾಬ್​​ಬಲ್ಲಿ ಈ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಲಾಗಿದೆ.

ಈ ಕ್ಷಿಪಣಿಯನ್ನ ವಿವಿಧ ಪ್ಲಾಟ್​​ಫಾರ್ಮ್​ಗಳ ಮೂಲಕ ಉಡಾವಣೆ ಮಾಡಬಹುದು. ಸಾಮಾನ್ಯ ಅಸ್ತ್ರಗಳು ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವಂತೆ ಕ್ಷಿಪಣಿಯನ್ನ ವಿನ್ಯಾಸಗೊಳಿಸಲಾಗಿದೆ. 300 ಕೆ.ಜಿ ತೂಕದ ಅಸ್ತ್ರಗಳನ್ನ ಇದರಲ್ಲಿ ಅಳವಡಿಸಬಹುದು. ಅಣ್ವಸ್ತ್ರ ಸಾಮರ್ಥ್ಯ ಹೊಂದಿರೋ ನಿರ್ಭಯ್​​, 0.6 ರಿಂದ 0.7 ಮ್ಯಾಕ್ (ಗಂಟೆಗೆ ಸುಮಾರು 740ರಿಂದ 864 ಕಿ.ಮೀ) ವೇಗದಲ್ಲಿ ಹೋಗಬಲ್ಲದ್ದಾಗಿದೆ. 1 ಸಾವಿರ ಕಿಲೋಮೀಟರ್​ ದೂರದಿಂದ ಟಾರ್ಗೆಟ್​​​ ಹೊಡೆದುಹಾಕಬಲ್ಲ ಸಾಮರ್ಥ್ಯ ಹೊಂದಿದೆ.

ಇನ್ನು ಈ ಕ್ಷಿಪಣಿ 1500 ಕೆ.ಜಿ ತೂಕವಿದ್ದು, 24 ವಿವಿಧ ಬಗೆಯ ಅಸ್ತ್ರಗಳನ್ನ ಪ್ರಯೋಗಿಸಬಲ್ಲದು. ಶತ್ರು ದೇಶದ ರಡಾರ್​​ ಇದನ್ನ ಪತ್ತೆಹಚ್ಚದ ರೀತಿಯಲ್ಲಿ ಕಡಿಮೆ ಎತ್ತರದಲ್ಲೂ ಹಾರಾಟ ಮಾಡಬಲ್ಲದು. ಅಲ್ಲದೆ ಹಲವಾರು ಟಾರ್ಗೆಟ್​​​ಗಳ ಮಧ್ಯೆ ನಿರ್ದಿಷ್ಟ ಟಾರ್ಗೆಟ್​​ ಹೊಡೆದುಹಾಕಬಲ್ಲ ಸಾಮರ್ಥ್ಯ ಹೊಂದಿದೆ.

ಕ್ಷಿಪಣಿ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆ ಕೇಂದ್ರ ಸಚಿವ ಪಿಯೂಶ್​ ಗೋಯಲ್ ಟ್ವೀಟ್​ ಮಾಡಿ, ಡಿಆರ್​ಡಿಓ ತಂಡಕ್ಕೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಪರಾಕ್ರಮವನ್ನು ಇತ್ತು ಮತ್ತಷ್ಟು ವೃದ್ಧಿ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv