ಇದೇ ಮೊದಲ ಬಾರಿಗೆ ವಿದೇಶಗಳಿಗೆ ರಫ್ತಾಗಲಿವೆ ಭಾರತದ ಕ್ಷಿಪಣಿ..!

ಸಿಂಗಪುರ್:​ ಇದೇ ಮೊದಲ ಬಾರಿಗೆ ಭಾರತ ನಿರ್ಮಿತ ಕ್ಷಿಪಣಿಯೊಂದು ಬೇರೆ ದೇಶಕ್ಕೆ ಮಾರಾಟವಾಗಲಿದೆ. ಭಾರತ-ರಷ್ಯಾ ಜೊತೆಗೂಡಿ ನಿರ್ಮಿಸಿದ್ದ ಬ್ರಹ್ಮೋಸ್​ ಕ್ಷಿಪಣಿಗೆ ಭಾರೀ ಬೇಡಿಕೆ ಉಂಟಾಗಿದೆ. ಈ ಹಿನ್ನೆಲೆ ಬ್ರಹ್ಮೋಸ್​ ಕ್ಷಿಪಣಿ ಕೊಳ್ಳಲು ದಕ್ಷಿಣ-ಪೂರ್ವ ಏಷ್ಯಾ ದೇಶಗಳು ಹಾಗೂ ಗಲ್ಫ್​ ದೇಶಗಳು ತುದಿಗಾಲಲ್ಲಿ ನಿಂತಿವೆ. ಈ ಬಗ್ಗೆ ಬ್ರಹ್ಮೋಸ್ ಏರೋಸ್ಪೇಸ್​ನ ಚೀಫ್​ ಜನರಲ್ ಮ್ಯಾನೇಜರ್ ಎಸ್​. ಕೆ ಅಯ್ಯರ್​, ಸಿಂಗರ್​ನಲ್ಲಿ ನಡೆಯುತ್ತಿರುವ IMDEX ಏಷ್ಯಾ -2019ರ ಪ್ರದರ್ಶನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಎಸ್​.ಕೆ ಅಯ್ಯರ್​, ಗಲ್ಫ್​ ದೇಶಗಳು ಇದೇ ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಆಸಕ್ತಿ ತೋರಿದ್ದಾರೆ. ಸದ್ಯ ರಫ್ತು ಮಾಡಲು ನಾವು ಭಾರತ ಸರ್ಕಾರದ ಅನುಮತಿಗಾಗಿ ನಾವು ಕಾಯುತ್ತಿದ್ದು, ಅನುಮತಿ ಸಿಕ್ಕ ನಂತರ ರಫ್ತು ಕಾರ್ಯಗಳು ನಡೆಯಲಿವೆ ಅಂತಾ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv