ಭಾರತ-ಪಾಕ್​ ಪಂದ್ಯವನ್ನ ಯುದ್ಧಕ್ಕೆ ಹೋಲಿಸಿದ ಸೆಹ್ವಾಗ್

ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಯಾವುದೇ ಯುದ್ಧಕ್ಕೂ ಕಡಿಮೆಯಿಲ್ಲ ಅಂತ ಭಾರತದ ಮಾಜಿ ಕ್ರಿಕೆಟರ್​ ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ. ಗೋವಾ ಉತ್ಸವದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿರೇಂದ್ರ ಸೆಹ್ವಾಗ್, ವಿಶ್ವಕಪ್​ನಲ್ಲಿ ಭಾರತ ಪಾಕ್​ನೊಂದಿಗೆ ಪಂದ್ಯ ಆಡಲೇಬೇಕು. ಅಲ್ಲಿ ಎರಡು ಪಾಯಿಂಟ್​ಗಳಿವೆ. ಪಾಯಿಂಟ್​ಗಳಿದ್ದಾಗ ನಾವು ಯುದ್ಧಕ್ಕೆ ಇಳಿಯಲೇಬೇಕು ಅಂತಾ ಕರೆ ನೀಡಿದ್ದಾರೆ. ಭಾರತ-ಪಾಕ್ ನಡುವೆ ಪಂದ್ಯ ನಡೆದಲ್ಲಿ ಅದು ಯಾವುದೇ ಯುದ್ಧಕ್ಕೂ ಕಡಿಮೆಯಿರೋದಿಲ್ಲ ಅಂತ ಹೇಳಿದ್ದಾರೆ.

ಇನ್ನು ಲೋಕಸಭಾ ಚುನಾವಣೆ ಬಗ್ಗೆಯೂ ಮಾತನಾಡಿದ ವೀರೂ, ದೇಶದ ಹಿತಕ್ಕಾಗಿ, ಸೇನೆಯ ಹಿತಕ್ಕಾಗಿ ಯಾರು ಸಮರ್ಥ ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರೇ ನಿಜವಾದ ನಾಯಕ ಅಂತಾ ಮತದಾರರರಿಗೆ ಆಲೋಚಿಸಿ ಮತ ಹಾಕುವ ಸಲಹೆ ನೀಡಿದ್ದಾರೆ. ಇದರ ನಡುವೆ ತಮ್ಮ ರಾಜಕೀಯ ಎಂಟ್ರಿಯ ಬಗ್ಗೆ ಪ್ರಶ್ನಿಸಿದಾಗ ಸೆಹ್ವಾಗ್​ ನಕ್ಕು ಸುಮ್ಮನಾದ್ರು