ವಿಶ್ವದ ಆರ್ಥಿಕ ಮಾನದಂಡ ಸ್ಪರ್ಧೆಯಲ್ಲಿ ಸುಧಾರಣೆ ಕಂಡ ಭಾರತ, 43ನೇ ಸ್ಥಾನಕ್ಕೆ ಏರಿಕೆ..!

ನವದೆಹಲಿ: ವರ್ಡ್​​ ಕಾಂಪಿಟೇಟಿವ್ ಎಕನಾಮಿಯಲ್ಲಿ ಭಾರತ 43ನೇ ಸ್ಥಾನ ಪಡೆದುಕೊಂಡಿದೆ. 2019 IMD World Competitiveness ಱಂಕಿಂಗ್ ಪ್ರಕಾರ, ಸ್ಪರ್ಧಾತ್ಮಕ ದೃಷ್ಟಿಯ ಆರ್ಥಿಕ ಮಾನದಂಡದಲ್ಲಿ ಭಾರತ 44ನೇ ಸ್ಥಾನದಿಂದ 43 ಪ್ಲೇಸ್​ಗೆ ಜಿಗಿದ್ರೆ, ಸಿಂಗಾಪುರ ಇದೇ ಮೊದಲ ಬಾರಿಗೆ ಅಮೆರಿಕವನ್ನ ಹಿಂದಿಕ್ಕಿ ಮೊದಲ ಸ್ಥಾನವನ್ನ ಅಲಂಕರಿಸಿದೆ. ಸಿಂಗಾಪೂರ ಕಳೆದ ವರ್ಷ ಮೂರನೇ ಸ್ಥಾನದಲ್ಲಿತ್ತು, ಆದರೆ ಈ ಬಾರಿ ಹಾಂಗ್​​ ಕಾಂಗ್​, ಅಮೆರಿಕಾವನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಹಾಂಕ್​ಗಾಂಗ್ ಎರಡನೇ ಸ್ಥಾನದಲ್ಲಿಯೇ ಭದ್ರವಾಗಿದ್ದು, ಈ ಹಿಂದೆ ಮೊದಲ ಸ್ಥಾನದಲ್ಲಿ ಅಮೆರಿಕ ಮೂರನೇ ಸ್ಥಾನಕ್ಕೆ ಕುಸಿದಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ, ಯಾವುದೇ ದೇಶದ ಆರ್ಥಿಕತೆಯ ದೀರ್ಘಾವಧಿಯ ಪೈಪೋಟಿ ಬಹಳ ಮುಖ್ಯ. ಇದು ದೇಶದ ಬೆಳವಣಿಗೆಯನ್ನ ಸಾಧಿಸಲು ಸಹಾಯಕ. ಇದು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ನಾಗರಿಕರ ಕಲ್ಯಾಣಭಿವೃದ್ಧಿಯನ್ನೂ ಕಾಪಾಡಿಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಹಾಗೇ ನೋಡಿದ್ರೆ ಭಾರತ 2016 ರಲ್ಲಿ ಆರ್ಥಿಕ ಮಾನದಂಡ ವಿಶ್ವದಲ್ಲಿ 41ನೇ ಸ್ಥಾನದಲ್ಲಿತ್ತು. 2016 ರಲ್ಲಿ 45ನೇ ಸ್ಥಾನಕ್ಕೆ ಜಿಗಿದಿತ್ತು. 2018 ರಲ್ಲಿ 4ಕ್ಕೇರಿ ಇದೀಗ 43ನೇ ಸ್ಥಾನದಲ್ಲಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv