ದೇಶದಲ್ಲಿ ಕರ್ನಾಟಕ ಫಸ್ಟ್​.. ವಿಶ್ವದಲ್ಲಿ ಇಂಡಿಯಾ ನಂ.1, ಬೆಚ್ಚಿ ಬೀಳಿಸಿದ ಟಿಬಿ ರೋಗ

ನವದೆಹಲಿ: ಟಿಬಿ ಸೋಂಕು ನಿಯಂತ್ರಣಕ್ಕಾಗಿ ಹಲವು ಪ್ರಯೋಗಗಳು ನಡೆಯುತ್ತಲೇ ಇವೆ. ಟಿಬಿ ಸೋಂಕಿಗೆ ಸಿಲುಕುವವರ ಸಂಖ್ಯೆ ಮುಂದುವರೆಯುತ್ತಲೇ ಇದೆ. ಸಾವಿರಾರು ಮಂದಿ ಈ ಸಾಂಕ್ರಮಿಕ ರೋಗ ಟಿಬಿಗೆ ಬಲಿಯಾಗುತ್ತಿದ್ದಾರೆ. ಮಾನವನ ಶ್ವಾಸಕೋಶದ ಮೇಲೆ ಇದರಿಂದ ಪರಿಣಾಮ ಬೀರುತ್ತದೆ, ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೇ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.

2017ರಲ್ಲಿ ಅತೀ ಹೆಚ್ಚು ಟಿಬಿ ರೋಗ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ತಮಿಳುನಾಡು ಮತ್ತು ಬಿಹಾರ್​ ಹಾಗೂ ಸಿಕ್ಕಿಂ ಮತ್ತು ಲಕ್ಷದೀಪಗಳಲ್ಲಿ ಟಿಬಿ ಕಾಣಿಸಿಕೊಂಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಪ್ರಕಾರ, ಕಳೆದ ವರ್ಷ ಕರ್ನಾಟಕದಲ್ಲಿ 4,357 ಮಂದಿಗೆ ಟಿಬಿ ಕಾಣಿಸಿಕೊಂಡಿದೆ.

ತಮಿಳುನಾಡಿನಲ್ಲಿ 3,953, ಸಿಕ್ಕಿಂ 9, ಲಕ್ಷದೀಪ 14 ಮಂದಿಗೆ ಟಿಬಿ ರೋಗ ಕಾಣಿಸಿಕೊಂಡಿದೆ. ಭಾರತದ ರಾಜಧಾನಿ ದೆಹಲಿ, ಛತ್ತೀಸ್​ಘಡ್​​, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿಯೂ 621,206,41,23 ಟಿಬಿ ಪ್ರಕರಣಗಳು ಪತ್ತೆಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಹೆಚ್​ಒ)ಯ ಇತ್ತೀಚಿನ ವರದಿ ಪ್ರಕಾರ, ಟಿಬಿ ಪ್ರಕರಣ ಪಟ್ಟಿಯಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಯುನೈಟೆಡ್​​ ನೇಷನ್​ನ ಡಬ್ಲೂಹೆಚ್​ಒ 2018 ಗ್ಲೋಬಲ್​​ ಟಿಬಿ ರಿಪೋರ್ಟ್​​ ಈ ಅಂಶವನ್ನು ಬಹಿರಂಗಪಡಿಸಿದೆ.

ಕಳೆದ ವರ್ಷ 10 ಮಿಲಿಯನ್​​ ಟಿಬಿ ಪ್ರಕರಣ ಪತ್ತೆಯಾಗಿವೆ. ಇದರಲ್ಲಿ 6.4 ಮಿಲಿಯನ್​​ ಟಿಬಿ ಪ್ರಕರಣವನ್ನು ಅಧಿಕೃತವಾಗಿ ರಾಷ್ಟ್ರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ. ಭಾರತದಲ್ಲಿ ಶೇ24, ಚೀನಾ ಶೇ13, ರಷ್ಯಾ ಶೇ10ರಷ್ಟು ಟಿಬಿ ಪ್ರಕರಣ ಕಾಣಿಸಿಕೊಂಡಿವೆ.