ಇಂಡಿಯನ್​​ ಏರ್​​ಫೋರ್ಸ್​ಗೆ ಆನೆ ಬಲ, ಸೇನಾ ಬತ್ತಳಿಕೆಗೆ 4 ಚಿನೂಕ್​ ಹೆಲಿಕಾಪ್ಟರ್..!

ನವದೆಹಲಿ: ಭಾರತೀಯ ವಾಯುಪಡೆಗೆ ಅತ್ಯಾಧುನಿಕ ಚಿನೂಕ್​ ಹೆಲಿಕಾಪ್ಟರ್​ ಸೇರ್ಪಡೆಯಾಗಿವೆ. ಮೊದಲ ಹಂತವಾಗಿ 4 ಚಿನೂಕ್​ ಹೆಲಿಕಾಪ್ಟರ್​​ಗಳು ಗುಜರಾತ್​ ಏರ್​ಪೋರ್ಟ್​ಗೆ ಬಂದಿಳಿದಿವೆ. ಈ ಚಿನೂಕ್​​ಗಳು ಅಮೆರಿಕಾದಲ್ಲಿ ತಯಾರಾಗಿದ್ದು, ಒಟ್ಟು ಇಂತಹ 15 ಹೆಲಿಕಾಪ್ಟರ್​ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಎನ್​ಡಿಎ ಸರ್ಕಾರ ಅಮೆರಿಕಾದೊಂದಿಗೆ 2015 ರಲ್ಲಿ 15 ಹೆಲಿಕಾಪ್ಟರ್​ಗೆ ಒಟ್ಟು 2 ಬಿಲಿಯನ್ ಡಾಲರ್  (₹ 2,13,52,65,00,000)ಗೆ ಒಪ್ಪಂದ ಮಾಡಿಕೊಂಡಿತ್ತು.

ಹೆಲಿಕಾಪ್ಟರ್​ಗಳ ವಿಶೇಷತೆ ಏನು..? 

  • ಅತೀ ಹೆಚ್ಚು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿವೆ
  • ಎರಡು ಎಂಜಿನ್​ಗಳ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರ್
  • ಅಮೆರಿಕಾದ ರೊಟೊಕ್ರಾಪ್ಟ್​​ ಕಂಪನಿಯಿಂದ ತಯಾರಿಕೆ
  • ವಾಷಿಗ್ಟಂನ್​ ನಿವಾಸಿ ‘ಚಿನೂಕ್​’ಗಳ ಹೆಸರನ್ನೇ ಇಡಲಾಗಿದೆ
  • ಮಲ್ಟಿ-ರೋಲ್​, ವರ್ಟಿಕಲ್-ಲಿಫ್ಟ್​ ಪ್ಲಾಟ್​​ಫಾರ್ಮ್​​ ವ್ಯವಸ್ಥೆ
  • ಫಿರಂಗಿ, ಇಂಧನ, ಶಸ್ತ್ರಾಸ್ತ್ರಗಳನ್ನ ಕೊಂಡೊಯ್ಯಲಿದೆ
  • ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲೂ ಬಳಕೆಗೆ ಸಹಾಯಕ
  • ಇದೇ ವರ್ಷದ ಅಂತ್ಯದೊಳಗೆ ಪರೀಕ್ಷಾರ್ಥವಾಗಿ ಗನ್ ಆಪರೇಷನ್
  • ಚೀನಾ ಗಡಿ ಭಾಗದ ರಕ್ಷಣೆಗೆ ಇದನ್ನ ಬಳಸಿಕೊಳ್ಳಲು ಸೇನೆ ಚಿಂತನೆ