ಎರಡನೇ ಟೆಸ್ಟ್​: ಮಳೆಯಲ್ಲಿ ಕೊಚ್ಚಿಹೋದ ಮೊದಲ ದಿನದಾಟ

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್​ನ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ. ಮೊದಲ ದಿನದಾಟದಲ್ಲಿ ಟಾಸ್ ಮುನ್ನವೇ ಶುರುವಾದ ಮಳೆ ದಿನವಿಡಿ ಅಡ್ಡಿಪಡಿಸಿತು. ಪರಿಣಾಮ ಟಾಸ್ ಕೂಡ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಿಚ್ ಪರೀಕ್ಷಿಸಿದ ಅಂಪೈರ್ಗಳು ಮೊದಲ ದಿನದಾಟವನ್ನು ರದ್ದುಗೊಳಿಸಿದ್ದಾರೆ. ಉಭಯ ತಂಡಗಳಿಗೂ ನಿಗದಿಗಿಂತ 30 ನಿಮಿಷ ಮೊದಲೇ ಊಟದ ವಿರಾಮ ನೀಡಲಾಗಿತ್ತು. ಆದ್ರೆ ಮಧ್ಯಾಹ್ನದ ನಂತರವು ಬಿಡುವಿಲ್ಲದೆ ಮಳೆ ಸುರಿಯಿತು. ಮೈದಾನವನ್ನು ಪರೀಕ್ಷಿಸಿ ವಿರಾಮ ಮುಗಿದ 45 ನಿಮಿಷದ ನಂತರ ಆಟವನ್ನು ರದ್ದು ಪಡಿಸಿದ್ರು. ಇನ್ನೂ ಹಲವು ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆ ಇದ್ದು ಈ ಪಂದ್ಯ ಮಳೆಗೆ ಅಡ್ಡಿ ಮಾಡೋ ಸಾಧ್ಯತೆ ಇದೆ. ಉಳಿದ ನಾಲ್ಕು ದಿನದಲ್ಲಿ ದಿನಕ್ಕೆ 96 ಓವರ್​ ನಿಗದಿ ಮಾಡಲಾಗಿದೆ. ಮಳೆಯ ನಡುವೆಯೇ ಟೀಂ ಇಂಡಿಯಾ ನಾಯಕ ಕೊಹ್ಲಿ, ದಿನೇಶ್​ ಕಾರ್ತಿಕ್​, ಶಾರ್ದುಲ್‌ ಠಾಕುರ್​, ಬೂಮ್ರಾ ಹಾಗೂ ಇಂಗ್ಲೆಂಡ್‌ ಪರ ಕುಕ್​​ ಮತ್ತು ಕೀಟಾನ್ ಜನ್ನಿಂಗ್ಸ್​ ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv