ಬೆಂಗಳೂರು ಹುಡ್ಗ ಶಿವಿಲ್ ಕೌಶಿಕ್ ಇದ್ದಕ್ಕಿದ್ದಂತೆ ಟೀಮ್ ಇಂಡಿಯಾ ಸೇರಿದ್ದೇಕೆ..?

ಇದೇ ಜೂನ್ 14ರಂದು ಅಫ್ಘಾನಿಸ್ತಾನ್ ತಂಡ ಟೀಮ್ ಇಂಡಿಯಾದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನ ಆಡಲು ಸಜ್ಜಾಗಿದೆ. ಮುಖ್ಯವಾಗಿ ಈ ಪಂದ್ಯದಲ್ಲಿ ಎರಡು ತಂಡಗಳ ಸ್ಪಿನ್ನರ್​​​ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯಾಕಂದ್ರೆ ಅಫ್ಘಾನ್​​​​​​ ತಂಡದ ಇಬ್ಬರು ಸ್ಪಿನ್ನರ್​​​​ಗಳು ಸದ್ಯ ಫುಲ್ ಜೋಶ್​​​ನಲ್ಲಿದ್ದಾರೆ. ಇನ್ನು ಕ್ರಿಕೆಟ್​​ ಶಿಶು ಮಣಿಸಲು ಟೀಮ್ ಇಂಡಿಯಾ ಕೂಡ ರಣತಂತ್ರಗಳನ್ನ ರೂಪಿಸಿದೆ. ಹೀಗಾಗಿ ಉಭಯ ತಂಡಗಳು ಹೆಚ್ಚಾಗಿ ಸ್ಪಿನ್ನರ್​​​ಗಳ ಮೇಲೆ ಹೆಚ್ಚು ನಿರೀಕ್ಷೆಗಳನ್ನ ಇಟ್ಟುಕೊಂಡಿವೆ. ​​​​​​​​​​​​​

ಇಂಡೋ-ಅಫ್ಘಾನ್ ಸ್ಪಿನ್ನರ್​​​ಗಳ​​ ಕಾಳಗ
ಹೌದು…ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್​​​​​ ನಡುವೆ ಸ್ಪಿನ್​​ ಕಾಳಗ ನಡೆಯಲಿದೆ. ಯಾಕಂದ್ರೆ, ಇತ್ತೀಚೆಗೆ ಐಪಿಎಲ್​​​​​ ಹಾಗೂ ಬಾಂಗ್ಲಾ ವಿರುದ್ಧ ಭರ್ಜರಿ ಫಾರ್ಮ್​ನಲ್ಲರೋ ಅಫ್ಘಾನ್ ಸ್ಪಿನ್ನರ್ಸ್​​​ ರಶೀದ್ ಖಾನ್, ಮುಜೀಬ್ ಉರ್ ರೆಹಮನ್ ಹಾಗೂ ಮೊಹಮ್ಮದ್ ನಬಿ ಮಿಂಚಿದ್ರು. ಇದೀಗ ತನ್ನ ಚೊಚ್ಚಲ ಟೆಸ್ಟ್​​ ಮ್ಯಾಚ್​​ನಲ್ಲಿ ಭಾರತದ ವಿರುದ್ಧ ಅಫ್ಘಾನ್ ತನ್ನ ಸ್ಪಿನ್​​​​​​​ ಅಸ್ತ್ರವನ್ನ ಬಿಡಲು ರಣತಂತ್ರಗಳನ್ನ ರೂಪಿಸಿದೆ. ಇನ್ನು ಇತ್ತ ಟೀಮ್ ಇಂಡಿಯಾ ಸಹ ತನ್ನ ಸ್ಪಿನ್​​​ ಅಸ್ತ್ರವನ್ನ ಬಳಸಲು ತಯಾರಿ ನಡೆಸಿದೆ. ಇದಕ್ಕಾಗಿ ಟಿಮಿಟೆಡ್​​ ಓವರ್ ಸ್ಪಿನ್​ ಸ್ಪೆಷಲಿಸ್ಟ್​​ ಯಜುವೇಂದ್ರ ಚಹಲ್ ಹಾಗೂ ಶಿವಿಲ್ ಕೌಶಿಕ್​​​​​​​​​​​​​​​​ ಕರೆತರಲು ಟೀಮ್ ಇಂಡಿಯಾ ಮ್ಯಾನೇಜ್​​​​​ಮೆಂಟ್ ಮುಂದಾಗಿದೆ. ಈ ಇಬ್ಬರು ಮಿಸ್ಟರಿ ಸ್ಪಿನ್ನರ್​​ಗಳಿಗೆ ಕುಲ್​​​ದೀಪ್​ ಯಾದವ್​​​​ ಸಹ ಸಾಥ್ ಕೊಡಲಿದ್ದಾರೆ. ಒಟ್ಟಿನಲ್ಲಿ ಉಭಯ ತಂಡಗಳು ಹೆಚ್ಚಾಗಿ ಬ್ಯಾಟ್ಸ್​​​ಮನ್​​​​​ಕ್ಕಿಂತ ಸ್ಪಿನ್ನರ್​​ಗಳ ಮೇಲೆಯೇ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಂಡಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv