ಜನರಲ್ಲಿ ಕೀಳು ಮಟ್ಟದ ಅಭಿಪ್ರಾಯವನ್ನ ಜೆಡಿಎಸ್​​​ನರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ: ಸುಮಲತಾ

ಮಂಡ್ಯ: ಅಂಬರೀಶ್ ಕುಟುಂಬದ ಸಾಧನೆ ಶೂನ್ಯ ಎಂಬ ಜೆಡಿಎಸ್ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಈ ಕುರಿತು ಮಾತನಾಡಿದ ಸುಮಲತಾ, ಅವರ ಮಾತುಗಳಿಗೆ ಒಂದು ಸ್ಟ್ಯಾಂಡರ್ಡ್ ಇಲ್ಲ. ಅವರ ಮಾತುಗಳನ್ನ ಜನ ನೋಡುತ್ತಿದ್ದಾರೆ. ಅವರು ಇರುವ ಸ್ಥಾನಕ್ಕೆ ಗೌರವ ಕೊಡುವ, ಬೆಲೆ ಇರುವ ಮಾತುಗಳನ್ನೇ ಅವರು ಆಡಿಲ್ಲ. ಆ ಪಕ್ಷದ ಯಾರೂ ಒಳ್ಳೆಯ ಮಾತು ಆಡಿಲ್ಲ. ಜನರಲ್ಲಿ ಕೀಳು ಮಟ್ಟದ ಅಭಿಪ್ರಾಯವನ್ನ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅವರೇನೇ ಮಾತಾಡ್ಕೊಂಡ್ರು ಜನ ಅವರ ವಿರುದ್ಧವಾಗಿ ಇರ್ತಾರೆ ಬಿಡಿ. ಅವರ ಮಾತುಗಳಿಗೆ ನನ್ನಲ್ಲಿ ಏನೂ ಎಫೆಕ್ಟ್ ಇಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಸೋಲಿನ ಭಯದಿಂದ ಈ ರೀತಿ ಒಂದೊಂದು ಮಾತು ಹೇಳುತ್ತಿದ್ದಾರೆ. ಅವರಿಗೆ ಸೋಲಿನ ಭಯವಿದೆ. ಆ ರೀತಿ ಹೇಳ್ಕೊಂಡ್ರೆ ಜನರೇನೂ ಮರುಳಾಗಲ್ಲ. ಅವರ ಮಾತಿಂದ ನನಗೇನೂ ಅರ್ಟ್ ಆಗಲ್ಲ. ನನಗೆ ಅರ್ಟ್ ಆದರೆ ಅದನ್ನ ನನ್ನಲ್ಲೇ ಇಟ್ಟುಕೊಳ್ಳುತ್ತೇನೆ. ಆದರೆ ನನಗಿಂತ ಜಾಸ್ತಿ ಹರ್ಟ್ ಆಗೋದು ಜನಕ್ಕೆ. ಜನ ಸುಮ್ಮನೇ ಇರಲ್ಲ. ಸಿದ್ದರಾಮಯ್ಯ ಹೇಳಿಕೆಗೆ ಕಾಮೆಂಟ್ ಮಾಡಲ್ಲ ಎಂದರು. ಕಾವೇರಿ ಹೋರಾಟದ ವೇಳೆ ಸುಮಲತಾ ಎಲ್ಲಿದ್ದರು? ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸುಮಲತಾ, ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್. ಕಾವೇರಿ ಹೋರಾಟದ ವೇಳೆ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಅಂಬರೀಶ್ ಒಬ್ಬರೆ. ಇನ್ಯಾರಾದ್ರೂ ಆ ಕೆಲಸ ಮಾಡಿದ್ರೆ ತೋರಿಸಿ ಎಂದು ಪ್ರಶ್ನಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv