JDSನಿಂದ ನಿಮ್ಮೂರಿನ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ -ಸುಮಲತಾ

ಮಂಡ್ಯ: ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಲಕ್ಷ್ಮೀ ಅಶ್ವಿನ್ ಗೌಡ ಅವರ ಹುಟ್ಟೂರಲ್ಲಿ ಇಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​ ಮತಯಾಚನೆ ಮಾಡಿದರು. ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಕೋಡಿಹಳ್ಳಿ ನಿವೃತ್ತ ಐಆರ್​​​ಎಸ್​​​ ಅಧಿಕಾರಿ ಡಾ.ಲಕ್ಷ್ಮೀ ಅಶ್ವಿನ್ ಗೌಡ ಅವರ ಹುಟ್ಟೂರಾಗಿದೆ. ಮತಯಾಚನೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ, ಮಹಿಳೆಯರ ಬಗ್ಗೆ ಜೆಡಿಎಸ್ ಗೆ ಗೌರವ ಇಲ್ಲ. ಅಗೌರವದಿಂದ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ, ಮಂಡ್ಯದ ಸ್ವಾಭಿಮಾನ ಎತ್ತಿ ಹಿಡಿಯಿರಿ
ಜೆಡಿಎಸ್​​ನಿಂದ ನಿಮ್ಮೂರಿನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಕಷ್ಟ ಪಟ್ಟು ಓದಿ, ಐಎಎಸ್ ಮಾಡಿದ್ದರು. ಕೆಲಸ ಬಿಡಿಸಿ, ಕರ್ಕೊಂಡು ಬಂದು ಮೋಸ ಮಾಡಿದ್ದಾರೆ. ಈಗ ನನ್ನ ವಿರುದ್ಧ ಇಡೀ ಸರ್ಕಾರವೇ ನಿಂತಿದೆ. ನನಗೆ ವೋಟ್ ಮಾಡಿ ಆಶೀರ್ವದಿಸಿ. ಮಹಿಳೆಯರ, ಮಂಡ್ಯದ ಸ್ವಾಭಿಮಾನ ಎತ್ತಿ ಹಿಡಿಯಿರಿ ಎಂದು ಸುಮಲತಾ ಮತದಾರರಲ್ಲಿ ಮನವಿ ಮಾಡಿ. ಡಾ.ಲಕ್ಷ್ಮೀಗೆ ಜೆಡಿಎಸ್ ಮಾಡಿದ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv