ಇಂದಿರಾ ಕ್ಯಾಂಟೀನ್​ ಫುಡ್​ನಲ್ಲಿ ಹುಳುಗಳು!

ಕೊಡಗು: ಬಡವರ ಹಸಿವು ನೀಗಿಸಲೆಂದು ಹಿಂದಿನ ಸರಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್​ ದೊಡ್ಡ ಪಾತ್ರ ನಿಭಾಯಿಸುತ್ತಾ ಬಂದಿದೆ. ಯಾಕಂದ್ರೆ ನಮ್ಮಲ್ಲಿ ಕಡಿಮೆ ಹಣವಿದ್ರೂ ಹೊಟ್ಟೆ ತುಂಬಾ ಊಟ ಮಾಡಬಹುದು ಅಂತಾ ಇಂದಿರಾ ಕ್ಯಾಂಟೀನ್​ಗೆ ಹೋಗ್ತೀವಿ. ಆದ್ರೆ ಮಡಿಕೇರಿಯಲ್ಲಿ ​ ನಿನ್ನೆ ಮಧ್ಯಾಹ್ನ ಇಂದಿರಾ ಕ್ಯಾಂಟೀನ್​ಗೆ ಹೋದ ಗ್ರಾಹಕನಿಗೆ ಒಂದು ದೊಡ್ಡ ಶಾಕ್​ ಕಾದಿತ್ತು. ಅದೇನಪ್ಪಾ ಅಂದ್ರೆ.. ಫುಡ್‍ನಲ್ಲಿ ಹುಳ ಪತ್ತೆಯಾಗಿದೆ. ರಾಮನಗರದ ಕಿರಣ್ ಎಂಬುವವರು ಊಟ ಮಾಡುವಾಗ ಹುಳ ಸಿಕ್ಕಿದೆ. ಈ ವೇಳೆ ಕಿರಣ್ ಮತ್ತು ಸ್ನೇಹಿತರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಹುಳ ಪತ್ತೆಯಾಗಿದ್ದನ್ನು ಸಮರ್ಥಿಸಿಕೊಂಡ ಕ್ಯಾಂಟೀನ್ ಉಸ್ತುವಾರಿ ಡಾನ್ ಅಬೋಟ್, ಬೆಂಡೆಕಾಯಿ, ಬದನೆಕಾಯಿಯಲ್ಲಿ ಹುಳ ಇರುತ್ತೆ. ನಾವು ಆದಷ್ಟು ಸ್ವಚ್ಛ ಮಾಡುತ್ತೇವೆ. ಆದ್ರೆ ಕೆಲವೊಮ್ಮೆ ನಮ್ಮ ಕಣ್ಣಿಗೆ ಕಾಣದೆ ಸೇರಿಕೊಂಡಿರಬಹುದು. ಈ ಕಾರಣಕ್ಕೆ ನಮ್ಮ ಮೇಲೆ ಆರೋಪ ಹೊರಿಸೋದು ಸರಿಯಲ್ಲ ಅಂತಾ ಉಡಾಫೆ ಉತ್ತರ ನೀಡಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv