ಆಸ್ಟ್ರೇಲಿಯಾ ವಿರುದ್ಧ ರಿಷಬ್ ಪಂತ್ ಓಪನರ್ ಬ್ಯಾಟ್ಸ್​​​ಮನ್​..!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಡ್ಯಾಶಿಂಗ್ ಬ್ಯಾಟ್ಸ್​ಮನ್ ರಿಷಬ್ ಪಂತ್, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರಾ.? ಹೀಗೊಂದು ಪ್ರಶ್ನೆ ಈಗ ಮೂಡಿದೆ. ಸ್ವತ: ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್ ಈ ಸುಳಿವು ನೀಡಿದ್ದಾರೆ. ಹಲವು ಕಾರಣಗಳಿಂದಾಗಿ ಪಂತ್​ರನ್ನ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಸರಣಿಯಲ್ಲಿ ಪಂತ್ ಓಪನರ್​ ಆಗಿ ಆಡಿಸುವ ಬಗ್ಗೆಯು ಚಿಂತಿಸಲಾಗುತ್ತಿದೆ. ಪಂತ್ ಎಡಗೈ ಬ್ಯಾಟ್ಸ್​​ಮನ್ ಆಗಿರೋ ಕಾರಣ, ಬಲಗೈ ಬ್ಯಾಟ್ಸ್​ಮನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಲಾಭವಾಗಲಿದೆ ಎಂದು ಪ್ರಸಾದ್ ಹೇಳಿದ್ದಾರೆ. ಆಸ್ಟ್ರೇಲಿಯಾ ಮಾಜಿ ಆಟಗಾರ ಸ್ಪಿನ್ ದಿಗ್ಗಜ ಶೇನ್​ವಾರ್ನ ಹಾಗು ಬ್ಯಾಟಿಂಗ್ ದಂತಕಥೆ ಸುನಿಲ್​ ಗವಾಸ್ಕರ್ ಕೂಡ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ, ರಿಷಬ್​ರನ್ನ ಆರಂಭಿಕರಾಗಿ ಆಡಿಸುವ ಸಲಹೆ ನೀಡಿದ್ರು. ಏಕದಿನ ತಂಡದಲ್ಲಿ ಎರಡನೇ ವಿಕೆಟ್​ ಕೀಪರ್ ಬ್ಯಾಟ್ಸ್​​ಮನ್ ಸ್ಥಾನಕ್ಕಾಗಿ, ದಿನೇಶ್ ಕಾರ್ತಿಕ್ ಹಾಗು ಪಂತ್ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತು. ಅದ್ರೆ ಯುವ ಬ್ಯಾಟ್ಸ್​ಮನ್ ಅನ್ನೋ ಕಾರಣಕ್ಕೆ ಡಿಕೆಗೆ ಕೊಕ್ ನೀಡಿದ ಆಯ್ಕೆ ಸಮಿತಿ, ಪಂತ್​ಗೆ ಸ್ಥಾನ ಕಲ್ಪಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಈ ಡೆಲ್ಲಿ ಬ್ಯಾಟ್ಸ್​​​ಮನ್ ಬ್ಯಾಟಿಂಗ್ ಹಾಗು ಕೀಪಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಆದ್ರೆ ಏಕದಿನ ಸರಣಿಯಿಂದ ಹೊರಗುಳಿದಿದ್ರು. ನಂತರ ಭಾರತ ಎ ತಂಡದ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರು. ನ್ಯೂಜಿಲೆಂಡ್ ವಿರುದ್ಧ ಚುಟುಕು ಸರಣಿಯಲ್ಲಿ ಮಿಂಚಿದ್ದ  ಪಂತ್, ಈಗ ತವರಿನಲ್ಲಿ ಆಸಿಸ್​ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.