2020ರಲ್ಲಿ ಮತ್ತೆ ಬರಲಿದೆ 1983ರ ವಿಶ್ವಕಪ್​!

ಕ್ರಿಕೆಟ್​​ನಲ್ಲಿ ಇದುವರೆಗೂ ಭಾರತೀಯರು ಮರೆಯದ ಇಸವಿಯೆಂದರೆ ಅದು ‘1983’. ಈ ಇಸವಿಯ ಹೆಸರಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು ಈಗ ಶೂಟಿಂಗ್ ಹಂತದಲ್ಲಿದೆ. ಈಗ ವಿಷಯ ಏನಂದ್ರೆ ಈ ಸಿನಿಮಾ ಮುಂದಿನ ವರ್ಷ ಅಂದರೆ 2020ರ ಗುಡ್​ಫ್ರೈಡೆಯಂದು ರಿಲೀಸ್​ ಆಗಲಿದೆಯಂತೆ. ಹೀಗಂತ ಸ್ವತಃ ಸಿನಿಮಾದ ಹೀರೋ ರಣ್ವೀರ್​ ಸಿಂಗ್​ ಹೇಳಿದ್ದಾರೆ.
ಚಿತ್ರದ ಮೇಕಿಂಗ್‌ನಲ್ಲಿ ರೀಲ್‌ ಕ್ರಿಕೆಟರ್‌ಗಳಿಗೆ ರಿಯಲ್ ಕ್ರಿಕೆಟರ್ಸ್‌ ಪ್ರಾಕ್ಟೀಸ್ ನೀಡುತ್ತಿದ್ದಾರೆ. ಕಪಿಲ್‌ ದೇವ್‌ ಪಾತ್ರವನ್ನು ರಣವೀರ್‌ ಸಿಂಗ್‌ ನಿಭಾಯಿಸುತ್ತಿದ್ದು, ಸ್ವತಃ ಕಪಿಲ್, ರಣವೀರ್‌ಗೆ ಕ್ರಿಕೆಟ್‌ನ ಟೆಕ್ನಿಕ್​​​ಗಳನ್ನು ಹೇಳಿಕೊಡುತ್ತಿದ್ದಾರೆ. ಜೊತೆಗೆ ಹೆಸರಾಂತ ವಿಕೆಟ್‌ ಕೀಪರ್‌ ಕರ್ನಾಟಕದ ಸಯ್ಯದ್‌ ಕಿರ್ಮಾನಿ ಪಾತ್ರವನ್ನು ಸಾಹಿಲ್‌ ಖಟ್ಟರ್‌, ಕೃಷ್ಣಮಾಚಾರಿ ಶ್ರೀಕಾಂತ್‌ ಪಾತ್ರವನ್ನು ಜೀವಾ, ದಿಲೀಪ್‌ ವೆಂಗಸರ್ಕರ್‌ ಪಾತ್ರವನ್ನು ಮರಾಠಿಯ ನಟ ಆದಿನಾಥ್‌ ಕೊಠಾರೊ ನಿಭಾಯಿಸುತ್ತಿದ್ದಾರೆ. ಇವರೆಲ್ಲರೂ ಆಯಾಯ ದಿಗ್ಗಜರ ಬಳಿಯಲ್ಲೇ ಟ್ರೈನಿಂಗ್​ ಪಡೆದುಕೊಳ್ತಿದ್ದಾರೆ. ಇವರ ಈ ಪ್ರಾಕ್ಟೀಸ್​​ ವಿಡಿಯೋವನ್ನು ರಣ್ವೀರ್​ ಸಿಂಗ್​ ತಮ್ಮ ಇನ್​ಸ್ಟ್ರಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv