ಇಡೀ ದಿನ ಆ್ಯಕ್ಟಿವ್​ ಆಗಿರಬೇಕಾ..? ಇಲ್ಲಿದೆ ಪ್ರಾಮಿಸ್ಸಿಂಗ್​ ಟಿಪ್ಸ್​

ಬೇಸಿಗೆ ಕಾಲದಲ್ಲಿ ಎಷ್ಟೇ ದ್ರವಹಾರಗಳನ್ನ ಸೇವಿಸಿದ್ರೂ, ಸುಸ್ತು ಕಡಿಮೆ ಆಗಲ್ಲ. ಆದ್ರೂ ಬಿಸಿಲಿನ ತಾಪ ತಾಳಲಾರದೇ ಕೃತಕವಾಗಿ ತಯಾರಿಸಲಾದ ಎನರ್ಜಿ ಡ್ರಿಂಕ್ಸ್​ಗಳ ಮೊರೆ ಹೊಗುತ್ತೇವೆ. ಆದ್ರೆ ಆ ಕ್ಷಣಕ್ಕೆ ನಮಗೆ ರಿಲಾಕ್ಸ್​ ನೀಡಿದ್ರೂ, ಅದರಲ್ಲಿ ಬಳಸುವ ಕೆಲವು ಪ್ರಿಸರ್​ವೇಟೀವ್ಸ್​ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಅದಕ್ಕಾಗೇ ನೈಸರ್ಗಿಕವಾಗಿ ನಿಮ್ಮ ಸ್ವಾಮಿನಾ ಹೆಚ್ಚಿಸಲು ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸಿದ್ರೆ ಉತ್ತಮ.

1. ಗ್ರೀನ್​ ಟೀ: ನಿಮ್ಮ ಸ್ಟಾಮಿನಾ ಹಾಗೂ ಶಕ್ತಿಯನ್ನ ಹೆಚ್ಚಿಸಲು ಗ್ರೀನ್​ ಟೀ ಅತ್ಯುತ್ತಮ ಮಾರ್ಗವಾಗಿದೆ. ಗ್ರೀನ್​ ಟೀ ಪಾಲಿಫಿನಾಲ್​ನಂತಹ ಕೆಲವು ರಾಸಾಯನಿಕಗಳನ್ನು ಹೊಂದಿದೆ,  ಇದು ಆಯಾಸ ಮತ್ತು ಒತ್ತಡವನ್ನು ಎದುರಿಸಲು ಸಾಕಷ್ಟು ಪರಿಣಾಮಕಾರಿಯಾಗಿದೆ. ಇದಲ್ಲದೆ, ಚೆನ್ನಾಗಿ ನಿದ್ರೆ ತರಿಸುತ್ತದೆ.  ಗ್ರೀನ್​ ಟೀ  ನಿರಂತರ ಸೇವನೆ ನಿಮ್ಮ ವ್ಯಾಯಾಮ ಗುಣಮಟ್ಟವನ್ನು 24 ಪ್ರತಿಶತದಷ್ಟು ಹೆಚ್ಚಿಸುತ್ತದೆ.

2. ಅರಿಶಿಣ: ಅರಿಶಿಣ ಕರ್ಕ್ಯುಮಿನ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿದೆ. ಇದು ಇನ್​ಫ್ಲಾಮೇಶನ್​ ಕಡಿಮೆ ಮಾಡಿ, ಸ್ಟಾಮಿನಾ ಹೆಚ್ಚಿಸುತ್ತದೆ. ನಿಮ್ಮ ಆಹಾರದಲ್ಲಿ ಅರಿಶಿಣವನ್ನ ಸೇರಿಸಿಕೊಳ್ಳುವುದರಿಂದ, ನಿಮಗೆ ಇನ್ಸ್​ಟ್ಯಾಂಟ್​ ಎಜರ್ನಿ ಸಿಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ, ಅರಿಶಿಣ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ಅದಕ್ಕಾಗಿ ಹಾಲಿನಲ್ಲಿ ಅರಿಶಿಣವನ್ನ ಬೆರೆಸಿ ನಿತ್ಯ ಸೇವಿಸಿ.

3. ಬಾಳೆಹಣ್ಣು: ನಿಮ್ಮ ಸ್ಟಾಮಿನಾ ಹೆಚ್ಚಿಸಲು ಬಾಳೆಹಣ್ಣು ಅದ್ಭುತವಾದ ಪದಾರ್ಥವಾಗಿದೆ. ಬಾಳೆಹಣ್ಣುಗಳಲ್ಲಿರುವ ಕಾರ್ಬೋಹೈಡ್ರೇಟ್ಸ್​ಗಳು, ನಿಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಫಿಟ್ನೆಸ್ ತಜ್ಞರು ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಲು ಬಾಳೆಹಣ್ಣನ್ನ ಸೇವಿಸಲು ಸಲಹೆ ನೀಡುತ್ತಾರೆ.

4. ಮೊಟ್ಟೆ: ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಅಂಶ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನ ಬಿಲ್ಡ್​ ಮಾಡುತ್ತದೆ.  ಅಷ್ಟೇ ಅಲ್ಲಾ ಸ್ಟಾಮಿನಾ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಒಂದು ಮೊಟ್ಟೆಯನ್ನ ಸೇವಿಸುವುದರಿಂದ ಇಡೀ ದಿನ ನೀವು ಎನರ್ಜಿಟಿಕ್​ ಆಗಿರಬಹುದು. ಜೊತೆಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವವರಿಗೆ ಹೆಚ್ಚಿನ ಸ್ಟಾಮಿನಾ ಅವಶ್ಯಕತೆ ಇರುವುದರಿಂದ ಹೆಚ್ಚಾಗಿ ಅವರು ಮೊಟ್ಟೆ ಸೇವಿಸುವುದು ಒಳಿತು.

ವಿಶೇಷ ಬರಹ: ಶ್ರುತಿ ಆರ್​


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv