ಧಗಧಗನೆ ಹೊತ್ತಿ ಉರಿದ ಅಗರಬತ್ತಿ ಗೋಡೌನ್

ಮೈಸೂರು: ಆಶೋಕಪುರಂ ನಿಲ್ದಾಣದ ಬಳಿ ಅಗರಬತ್ತಿ ಗೋಡೌನ್​​ವೊಂದರ​​​​ ಮೇಲೆ ವಿದ್ಯುತ್ ಕಂಬ ಬಿದ್ದು ಅಗ್ನಿ ದುರಂತ ಸಂಭವಸಿದೆ. ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮಳೆಯಿಂದ ಅಗರಬತ್ತಿ ಕಾರ್ಖಾನೆಯ ಪಕ್ಕದ ವಿದ್ಯತ್ ಕಂಬ ಬಿದ್ದು ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಅಗ್ನಿ ದುರಂತ ಸಂಭವಿಸಿದೆ ಅನ್ನೋ ಶಂಕೆ ವ್ಯಕ್ಯವಾಗಿದೆ

ಎನ್​. ರಂಗರಾವ್​ ಸಂಸ್ಥೆಗೆ ಸೇರಿದ ಗೋಡಾನ್​ ಇದಾಗಿದ್ದು, ಈ ದುರಂತದಿಂದಾಗಿ ಲಕ್ಷಾಂತರ ಮೌಲ್ಯದ ಕಚ್ಚಾ ಪದಾರ್ಥ ಬೆಂಕಿಗಾಹುತಿಯಾಗಿದೆ. ಗೋಡೌನ್ ಧಗಧಗನೆ ಹೊತ್ತಿ ಉರಿದಿದ್ದು, ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಇದನ್ನ ಕಂಡು ಸ್ಥಳೀಯರು ಆತಂಕಗೊಂಡಿದ್ರು. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲಾಗಿದೆ. ಸರಸ್ವತಿಪುರಂ ಠಾಣೆಯಿಂದ ಎರಡು, ಬನ್ನಿಮಂಟಪ್ಪ ಅಗ್ನಿಶಾಮಕ ಠಾಣೆಯಿಂದ ಎರಡು, ಆರ್​​​ಬಿಐ ಅಗ್ನಿ ಶಾಮಕ ಠಾಣೆಯಿಂದ ಒಂದು ವಾಹನ ಕಾರ್ಯಚರಣೆಯಲ್ಲಿ ಪಾಲ್ಗೂಂಡಿದ್ದವು.

ಮುಂಬರುವ ಹಬ್ಬಕ್ಕಾಗಿ ಮುಂಚಿತವಾಗಿ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಅಗರಬತ್ತಿ ತಯಾರಿಸಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದೆವು. ಗೋದಾಮಿನ ಒಳಗೆ ಪ್ಯಾಕಿಂಗ್ ಮಾಡಲು ಅಗರಬತ್ತಿ ಶೇಖರಣೆಯಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ನಾಶವಾಗಿವೆ ಎಂದು ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv