ನೆರವಿಗೆ ಬಾರದ ಸಿಎಂ ಸಾಲ ಮನ್ನಾ, ನೇಣಿಗೆ ಶರಣಾದ ರೈತ

ಬಾಗಲಕೋಟೆ: ಮುಖ್ಯಮಂತ್ರಿ ಹೆಚ್​.ಡಿ. ಕುಮಾರ ಸ್ವಾಮಿ ಬಜೆಟ್​ ಮಂಡನೆ ವೇಳೆ ಸಾಲ ಮನ್ನಾ ಘೋಶಿಸಿದ ನಂತರ ನಡೆದ ಮೊದಲ ರೈತರ ಆತ್ಮ ಹತ್ಯೆ ಪ್ರಕರಣ ಇದಾಗಿದೆ. ಸಿಎಂ ಕುಮಾರಸ್ವಾಮಿಯವರ ಮಹತ್ವಾಕಾಂಕ್ಷಿ ಸಾಲ ಮನ್ನಾ ಯೋಜನೆ ರೈತರಿಗೆ ಕೈಕೊಟ್ಟಿದೆ. ಯೋಜನೆ ರೈತರ ನೆರವಿಗೆ ಬಾರದೇ ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮಖಂಡಿ ತಾಲ್ಲೂಕಿನ‌ ಚಿಕ್ಕ ಪಡಸಲಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಪಾಂಡಪ್ಪ ರಾಮಪ್ಪ ಅಂಬಿ (55) ಆತ್ಮಹತ್ಯೆಗೆ ಶರಣಾದವರು. ರಾಮಪ್ಪ ವಿವಿಧ ಬ್ಯಾಂಕ್, ಸಹಕಾರಿ ಸಂಘ, ಕೈ ಸಾಲ ಸೇರಿದಂತೆ ತನ್ನ ಹಾಗೂ ಕುಟುಂಬ ಸದಸ್ಯರ ಹೆಸರಲ್ಲಿ 9 ಲಕ್ಷ ಸಾಲ ಮಾಡಿಕೊಂಡಿದ್ದರು. ಅಲ್ಲದೆ ಅವರ ಟ್ರ್ಯಾಕ್ಟರ್ ಮೇಲೂ ಸಾಲಕ್ಕೆ ಅರ್ಜಿ ಹಾಕಿದ್ದರು.
ಕೇವಲ ಎರಡು ಎಕರೆ ಜಮೀನು ಹೊಂದಿದ್ದ ರಾಮಪ್ಪ ನಿನ್ನೆ ಘೋಷಣೆಯಾದ ಸಾಲ ಮನ್ನಾದಲ್ಲಿ 2017 ಡಿಸೆಂಬರ್ 31ರ ಅಂತ್ಯದವರಿಗಿನ 2 ಲಕ್ಷ ಸಾಲ ಮಾತ್ರ ಮನ್ನಾ ಆಗಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಬಳಿಕ, ಬಾಕಿ ಉಳಿಯುವ ಸಾಲದ ಹೊರೆ ಬಗ್ಗೆ ಚಿಂತಿಸಿದ ರೈತ ರಾಮಪ್ಪ, ಹೊಲಕ್ಕೆ ನೀರು ಹಾಯಿಸೋದಾಗಿ ಹೇಳಿ ಹೋಗಿದ್ದರು. ಈ ವೇಳೆ ಜಮೀನಿನಲ್ಲಿರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಾವಳಗಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv