ಮುಂದಿನ ವಾರ ತಮಿಳುನಾಡಿಗೆ ಫ್ಯಾನಿ ಚಂಡಮಾರುತ, ರೆಡ್​ ಅಲರ್ಟ್​ ಘೋಷಣೆಗೆ IMD ಸೂಚನೆ

ನವದೆಹಲಿ: ಮುಂದಿನ ವಾರ ತಮಿಳುನಾಡಿಗೆ ಫ್ಯಾನಿ (Fani) ಸೈಕ್ಲೋನ್ ಬಂದು ಅಪ್ಪಳಿಸಲಿದೆ ಹವಾಮಾನ ಇಲಾಖೆ (India Meteorological Department) ಎಚ್ಚರಿಕೆ ನೀಡಿದೆ. ಏಪ್ರಿಲ್ 30 ರಿಂದ ಮೇ 1ರ ಒಳಗಾಗಿ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕರಾವಳಿ ಭಾಗಗಳಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಅಂತಾ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಸೈಕ್ಲೋನ್ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮುಂದಿನ 48 ಗಂಟೆಯೊಳಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಫ್ಯಾನಿ ಚಂಡ ಮಾರುತವು ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ಶ್ರೀಲಂಕಾವನ್ನು ಪ್ರವೇಶಿಸಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv