ವಿಶ್ವವನ್ನೇ ಬೆರಗುಗೊಳಿಸಿದ್ದ ಫೋಟೋಗೆ ಸಿಕ್ತು ಪ್ರತಿಷ್ಠಿತ ಅವಾರ್ಡ್​..!

ಆ್ಯಮ್​ಸ್ಟರ್​ಡ್ಯಾಮ್​: ಪುಟ್ಟ ಬಾಲಿಕಿಯೊಬ್ಬಳು ತನ್ನ ತಾಯಿಯೊಂದಿಗೆ ಮೆಕ್ಸಿಕೋ ಬಾರ್ಡರ್​ ದಾಟುತ್ತಿದ್ದಾಗ ಅಮೆರಿಕಾದ ಬಾರ್ಡರ್​ ಸೇನೆ ಪಡೆಗೆ ಸಿಲುಕಿದಾಗ ಮಗು ಬಿಕ್ಕಳಿಸುತ್ತಾ ಅಳುತ್ತಿರುವ ಫೋಟೋ ವಿಶ್ವವನ್ನೇ ಸಂಚಲನ ಸೃಷ್ಟಿಸಿತ್ತು. ಇದೀಗ ಆ ಫೋಟೋ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಮಾಧ್ಯಮ ಫೋಟೋ ಅವಾರ್ಡ್’​ ಗೆದ್ದಿದ್ದೆ.

ಹೊಂಡುರನ್ ಮಹಿಳೆ ​ಸ್ಯಾಂಡ್ರಾ ಸ್ಯಾಂಚೆಜ್​ ಮತ್ತು ಆಕೆಯ ಮಗಳಾದ ಯಾನೆಲ, ಅಮೆರಿಕಾ ಮತ್ತು ಮೆಕ್ಸಿಕೋ ಬಾರ್ಡರ್ ಅನ್ನ ಅಕ್ರಮವಾಗಿ ದಾಟುತ್ತಿದ್ದರು. ಈ ವೇಳೆ ಅಮೆರಿಕಾದ ಬಾರ್ಡರ್​ ಸೇನೆ ಪಡೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಮುಗ್ದ ಬಾಲಕಿ ಆಕ್ರಂದನ ಮನಕಲಕುವಂತಿರುವ ದೃಶ್ಯವನ್ನ ಗೆಟ್ಟಿ ಇಮೇಜಸ್ ಸಂಸ್ಥೆಯ​ ಹಿರಿಯ ಫೋಟೋಗ್ರಾಫರ್​ ಜಾನ್​ ಮೂರ್ ತೆಗೆದಿದ್ದಾರೆ. ಈ ಫೋಟೋ ವಿಶ್ವದಾದ್ಯಂತ ಪಬ್ಲಿಷ್​ ಆದ ನಂತರ ಬಾರಿ ಸಂಚಲನ ಸೃಷ್ಟಿಸಿದೆ. ಪೋಷಕರು ಮತ್ತು ಮಕ್ಕಳನ್ನ ಬೇರ್ಪಡಿಸುತ್ತಿದ್ದ ಅಮೆರಿಕಾದ ಕಾಂಟ್ರೋವರ್ಸಿಯಲ್ ನಿಯಮದ ಬಗ್ಗೆ ನಂತರ ದೊಡ್ಡ ಮಟ್ಟಿಗೆ ಖಂಡನೆ ಮತ್ತು ಟೀಕೆಗಳು ಕೇಳಿಬಂದಿದ್ದವು.