ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಭೂ ವಿಜ್ಞಾನಿ ವಿಫಲ: ಸೇವೆಯಿಂದ ಅಮಾನತು

ಕೋಲಾರ: ನಿರ್ಬಂಧಿತ ಪ್ರದೇಶದಲ್ಲಿ ಗಣಿಗಾರಿಕೆಯ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲರಾದ ಆರೋಪದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯನ್ನು ಗಣಿ ಇಲಾಖೆ ಅಮಾನತುಗೊಳಿಸಿದೆ.
ನಂಜುಡಸ್ವಾಮಿ ಅಮಾನತು ಆಗಿರುವ ಅಧಿಕಾರಿ. ಮಾಲೂರು ತಾಲೂಕಿನ ಟೇಕಲ್​ ಹೋಬಳಿಯ ಗ್ರಾಮಗಳಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಆದ್ದರಿಂದಾಗಿ ಅಕ್ರಮ ಗಣಿಗಾರಿಕೆ ನಿಷೇಧಿಸಿ ಎಂದು ಗಣಿ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ನಿಷೇದಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ದೃಢವಾದ ಹಿನ್ನೆಲೆ ಎಸ್​. ನಂಜುಂಡಸ್ವಾಮಿ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಗಣಿ ಇಲಾಖೆ 93 ಕೋಟಿ ದಂಡ ವಿಧಿಸಲಾಗಿತ್ತು. ನಂಜುಂಡಸ್ವಾಮಿ ದಂಡ ವಸೂಲಿ ಮಾಡಿರಲಿಲ್ಲ. ಅಲ್ಲದೇ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv